ಪುತ್ತೂರು: ಆಟೋ ರಿಕ್ಷಾ ಹಾಗೂ ಬೈಕ್ ಗಳ ನಡುವೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ ಮಗು ಸಹಿತ ಏಳು ಮಂದಿ ಗಾಯಗೊಂಡ ಘಟನೆ ಉರ್ಲಾಂಡಿ ಬೈಪಾಸ್ ರಸ್ತೆ ಬಳಿ ಭಾನುವಾರ ಸಂಜೆ ನಡೆದಿದೆ.
ರಿಕ್ಷಾದಲ್ಲಿದ್ದ ಉರೂಸ್ ಕಾರ್ಯಕ್ರಮದಿಂದ ಹಿಂದಿರುಗುತ್ತಿದ್ದ ಸಾಲೆತ್ತೂರು ಮೂಲದ ಮೊಮ್ಮದ್ ತಮೀಮ್ (6), ಹಮೀದ್ (40), ಇಸ್ಮಾಯಿಲ್ (45), ಇಬ್ರಾಹಿಂ (65), ಸಮೀರ್ (34), ಸುಲೈಮಾನ್ (6) ಹಾಗೂ ಬೈಕ್ ಸವಾರ ಕೀರ್ತನ್ ಗಾಯಗೊಂಡಿದ್ದಾರೆ.
ಅಪಘಾತದ ರಭಸಕ್ಕೆ ಆಟೋ ರಿಕ್ಷಾ ಪಲ್ಟಿಯಾಗಿದ್ದು, ಗಾಯಾಳುಗಳನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
























