ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಫಿಸಿಯೋತೆರಪಿ ಪರಿಕರಗಳ ಉದ್ಘಾಟನೆ

ಪುತ್ತೂರು: ರೋಟರೀ ಕ್ಲಬ್ ಯುವ , ಇನ್ನರ್ ವೀಲ್ ಕ್ಲಬ್ ಆಶ್ರಯದಲ್ಲಿ ಪುತ್ತೂರು ಸರಕಾರಿ ಆಸ್ಪತ್ರೆಗೆ ಫಿಸಿಯೋಥೆರಪಿ ಪರಿಕರಗಳನ್ನು ನೀಡಿದ್ದು ಇದರ ಉದ್ಘಾಟನಾ ಸಮಾರಂಭ ಭಾನುವಾರ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ನಡೆಯಿತು..

‌ಶಾಸಕ ಆಶೋಕ್ ಕುಮಾರ್ ರೈ ಸಮಾರಂಭ ಉದ್ಘಾಟಿಸಿ ಮಾತನಾಡಿ, ಪುತ್ತೂರಿನ ಸರಕಾರಿ ಆಸ್ಪತ್ರೆಗೆ ರೋಟರಿ ಕ್ಲಬ್‍ ನ ದೇಣಿಗೆ ಅತ್ಯಂತ ಹೆಚ್ಚಾಗಿದೆ. ಒಂದು ಕಾಲದಲ್ಲಿ ಡಯಾಲಿಸಿಸ್‍ ಗೆ ಪರದಾಟ ಉಂಟಾದ ಸಂದರ್ಭದಲ್ಲಿ ರೋಟರಿ ಕ್ಲಬ್‍ 6 ಮೆಷಿನ್‍ ಗಳನ್ನು ನೀಡಿ  ವ್ಯವಸ್ಥಿತ ರೀತಿಯಲ್ಲಿ ಸೂಕ್ತ ಪರಿಹಾರ ನೀಡಿದ್ದಾರೆ. ಈ ಮೂಲಕ  ಕಷ್ಟದಲ್ಲಿರುವ ಕಟ್ಟಕಡೆಯ ವ್ಯಕ್ತಿಯ ಕಣ್ಣೀರೊರೆಸುವ ಕೆಲಸ ಮಾಡಿದ್ದಾರೆ. ಒಟ್ಟಾರೆಯಾಗಿ ಖಾಸಗಿ ಆಸ್ಪತ್ರೆಗಿಂತಲೂ ಸರಕಾರಿ ಆಸ್ಪತ್ರೆ ಒಳ್ಳೆಯ ಚಿಕಿತ್ಸೆ ನೀಡುವಲ್ಲಿ ಕೊಡುಗೆಗಳನ್ನು ನೀಡುತ್ತಿರುವುದು ಶ್ಲಾಘನೀಯ ಎಂದರು.

ಈ ಸಂದರ್ಭದಲ್ಲಿ ರೋಟರಿ ಅಸಿಸ್ಟೆಂಟ್ ಗವರ್ನರ್ ಡಾ.ಹರ್ಷ ಕುಮಾರ್ ರೈ ಮಾಡಾವು, ಪುತ್ತೂರು ರೋಟರಿ ಅಧ್ಯಕ್ಷ ಡಾ.ಶ್ರೀಪತಿ ರಾವ್‍, ಕಾರ್ಯದರ್ಶಿ ದಾಮೋದರ್, ರೋಟರಿ ಯುವ ಅಧ್ಯಕ್ಷೆ ಅಶ್ವಿನಿಕೃಷ್ಣ ಮುಳಿಯ, ಕಾರ್ಯದರ್ಶಿ ವಚನಾ ಜಯರಾಮ್‍, ಇನ್ನರ್ ವೀಲ್‍ ಅಧ್ಯಕ್ಷೆ ರಾಜೇಶ್ವರಿ ಆಚಾರ್, ರೋಟರಿ ನಿಕಟಪೂರ್ವ ಅಧ್ಯಕ್ಷ ಜಯರಾಜ್‍ ಭಂಡಾರಿ, ರೋಟರಿ ಪೂರ್ವದ ವಿಶ್ವಾಸ್‍ ಶೆಣೈ, ಯುವಕ ರೋಟರಿ ಸ್ಥಾಪಕ ಅಧ್ಯಕ್ಷ ರತ್ನಾಕರ ರೈ, ನಿಟಕಪೂರ್ವ ಅಧ್ಯಕ್ಷ ಉಮೇಶ್ ನಾಯಕ್‍ ಪುತ್ತೂರು, ನಿಯೋಜಿತ ಅಧ್ಯಕ್ಷ ಕುಸುಮಾಧರ್ ಎಸ್‍.ಕೆ., ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್‍ ರೈ, ವೈದ್ಯಾಧಿಕಾರಿ ಡಾ.ಆಶಾ ಪುತ್ತೂರಾಯ, ಫಿಸಿಯೋತೆರಪಿ ವಿಭಾಗದ ಡಾ.ದೀಪಿಕಾ, ಡಾ.ಯದುರಾಜ್‍, ಆರೋಗ್ಯ ರಕ್ಷಾ ಸಮಿತಿಯ ಅರುಣಾ, ನಿಹಾಲ್‍ ಶೆಟ್ಟಿ ಉಪಸ್ಥಿತರಿದ್ದರು.





















































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top