ಅಳಿಕೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್ ವಿಟ್ಲ ತಾಲೂಕಿನ ಅಳಿಕೆ ವಲಯದ ಮುಳಿಯ ಕಲ್ಪ ವೃಕ್ಷ ಜ್ಞಾನವಿಕಾಸ ಕೇಂದ್ರದಲ್ಲಿ ತಂಬಾಕು ವಿರೋಧಿ ದಿನಾಚರಣೆ ಹಾಗೂ ಯುಟ್ಯೂಬ್ ಬಗ್ಗೆ ಮಾಹಿತಿ ನೀಡಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಾಲಕೃಷ್ಣ ಕಾರಂತರವರು ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಸಮುದಾಯ ಅರೋಗ್ಯ ಇಲಾಖೆಯ ರಂಜಿತಾ ಭಾಗವಹಿಸಿದ್ದರು. ಈ ಸಂಧರ್ಭ ಅಳಿಕೆ ವಲಯಧ್ಯಕ್ಷ ರಾಜೇಂದ್ರ ರೈ, ಮುಳಿಯ ಒಕ್ಕೂಟ ಅಧ್ಯಕ್ಷ ಉದಯ , ಕೇಂದ್ರದ ಅಧ್ಯಕ್ಷೆ ಶಾಲಿನಿ ಶೆಟ್ಟಿ,, ಸೇವಾ ಪ್ರತಿನಿಧಿ ಕಾವ್ಯ,, ಕೇಂದ್ರದ ಸದಸ್ಯರು ಉಪಸ್ಥಿತರಿದ್ದರು. ಸಮುದಾಯ ಅರೋಗ್ಯ ಇಲಾಖೆಯ ರಂಜಿತಾ ಕೇಂದ್ರದ ಸದಸ್ಯರಿಗೆ ಉಚಿತ ಶುಗರ್ ಹಾಗೂ ಬಿಪಿ ಪರೀಕ್ಷೆ ಮಾಡಿದರು.
ವಲಯ ಮೇಲ್ವಿಚಾರಕಿ ಮೀನಾಕ್ಷಿ ಕಾರ್ಯಕ್ರಮ ನಿರೂಪಿಸಿದರು. ಜ್ಞಾನವಿಕಾಸ ಸಮನ್ವಯಧಿಕಾರಿ ದೀಪ ಸ್ವಾಗತಿಸಿ, ಮುಳಿಯ ಸೇವಾಪ್ರತಿನಿಧಿ ವಿನಯ ಧನ್ಯವಾದ ನೀಡಿದರು.
























