ಯಕ್ಷ ಭಾರತಿ ಸಂಸ್ಥೆಯಿಂದ ಲೇಖನ ಸಾಮಗ್ರಿಗಳ ವಿತರಣೆ

ಪುತ್ತೂರು: ಯಕ್ಷ ಭಾರತಿ. ರಿ ಕನ್ಯಾಡಿ, ಬೆಳ್ತಂಗಡಿ ವತಿಯಿಂದ ಉಜಿರೆ ನಾಗರಾಜ ಕಾಂಪೌಂಡಿನಲ್ಲಿ ಶ್ರೀಮಾತಾ ಆರ್ಟ್ಸ್ ಸಹಕಾರದಿಂದ ಜರಗುತ್ತಿರುವ ಯಕ್ಷಗಾನ ನಾಟ್ಯ ತರಬೇತಿಯ ವಿದ್ಯಾರ್ಥಿಗಳಿಗೆ ಲೇಖನ ಸಾಮಗ್ರಿಗಳನ್ನು ವಿತರಿಸಲಾಯಿತು.

ಯಕ್ಷ ಭಾರತಿಯ ಪ್ರಧಾನ ಕಾರ್ಯದರ್ಶಿ ದಿವಾಕರ ಆಚಾರ್ಯ ಗೇರುಕಟ್ಟೆ , ನಾಟ್ಯ ಗುರು ಕಲಾವಿದ ಚಂದ್ರಶೇಖರ ಧರ್ಮಸ್ಥಳ ವಿದ್ಯಾರ್ಥಿಗಳಿಗೆ ಲೇಖನ ಸಾಮಗ್ರಿಗಳನ್ನು ವಿತರಿಸಿ ಶುಭ ಹಾರೈಸಿದರು.

 ಯಕ್ಷ ಭಾರತಿಯ ಆರೋಗ್ಯ ಸೇವಾ ವಿಭಾಗದ ಕುಸುಮಾಕರ ಕುತ್ತೋಡಿ, ಶ್ರೀಮಾತಾ ಅರ್ಟ್ಸ್ ಮಾಲಕರು ಮತ್ತು ಯಕ್ಷಭಾರತಿ ಟ್ರಸ್ಟಿ ಗುರುಪ್ರಸಾದ್, ಪೋಷಕರಾದ ನವೀನ ಉಪಸ್ಥಿತರಿದ್ದರು. ಯಕ್ಷಭಾರತಿ ಅಧ್ಯಕ್ಷ ರಾಘವೇಂದ್ರ ಬೈಪಾಡಿತ್ತಾಯ ಮತ್ತು ಸಂಚಾಲಕ ಮಹೇಶ್ ಕನ್ಯಾಡಿ ಕಾರ್ಯಕ್ರಮಕ್ಕೆ ಸಹಕರಿಸಿದ್ದರು.





















































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top