ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜೈನ ಸಂತ ಆಚಾರ್ಯ ಶ್ರೀ 108 ವಿದ್ಯಾನಂದ ಜೀ ಅವರ ಶತಮಾನೋತ್ಸವ ಸಮಾರಂಭದಲ್ಲಿ ‘ಧರ್ಮ ಚಕ್ರವರ್ತಿ’ ಬಿರುದು ಪ್ರದಾನಿಸಿ ಗೌರವಿಸಲಾಯಿತು.
ಈ ಸಂಬಂಧ ಮಾತನಾಡಿರುವ ಪ್ರಧಾನಿ ಮೋದಿ, ನೀವು ನನಗೆ ಧರ್ಮ ಚಕ್ರವರ್ತಿ ಬಿರುದು ನೀಡಿದ್ದೀರಿ. ಆದರೆ ನಾನಿದಕ್ಕೆ ಸೂಕ್ತನೋ ಗೊತ್ತಿಲ್ಲ. ಸಂತರಿಂದ ಏನೇ ದೊರೆತರೂ ಅದನ್ನು ಪ್ರಸಾದ ಎಂದು ಸ್ವೀಕರಿಸುವುದು ನಮ್ಮ ಸಂಸ್ಕೃತಿ. ಆದ್ದರಿಂದ ವಿನಯಪೂರ್ವಕವಾಗಿ ನಾನು ಇದನ್ನು ಸ್ವೀಕಾರ ಮಾಡುತ್ತೇನೆ. ಹಾಗೆಯೇ ಇದನ್ನು ತಾಯಿ ಭಾರತಿಗೆ ಅರ್ಪಿಸುತ್ತೇನೆ ಎಂದು ಹೇಳಿದ್ದಾರೆ.
ಶತಮಾನೋತ್ಸವ ಆಚರಣೆ ಆಚಾರ್ಯರಿಗೆ ವರ್ಷ ಪೂರ್ತಿ ರಾಷ್ಟ್ರೀಯ ಗೌರವ ಸಲ್ಲಿಸುವುದನ್ನು ಸೂಚಿಸುತ್ತದೆ. ಈ ಕಾರ್ಯಕ್ರಮವನ್ನು ಕೇಂದ್ರ ಸಂಸ್ಕೃತಿ ಸಚಿವಾಲಯವು ನವದೆಹಲಿಯ ಭಗವಾನ್ ಮಹಾವೀರ ಅಹಿಂಸಾ ಭಾರತಿ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸುತ್ತದೆ.
























