ಮಂಗಳೂರು: ಜಿಹಾದಿಗಳ ಮಚ್ಚಿನೇಟಿಗೆ ಬಲಿಯಾದ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ.
ಈ ಪ್ರಕರಣ ಸದ್ಯ ಎನ್‌ಐಎ ತನಿಖೆಯಲ್ಲಿದ್ದು, ಸುಹಾಸ್ ಹತ್ಯೆಗೆ ವಿದೇಶಿ ಫಂಡಿಂಗ್ ಆಗಿದೆಯೇ ಎನ್ನುವ ಬಗ್ಗೆ ತನಿಖೆ ನಡೆಯುತ್ತಿದೆ. ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟ ಆರೋಪಿಗಳ ಬ್ಯಾಂಕ್ ಖಾತೆಗಳ ಪರಿಶೀಲನೆ ಸಹ ನಡೆಯುತ್ತಿದೆ. 12 ಆರೋಪಿಗಳ ಬೇರೆ ಬೇರೆ ಬ್ಯಾಂಕ್ ಖಾತೆಗಳ ಪರಿಶೀಲನೆ ನಡೆಯುತ್ತಿದ್ದು, ಸ್ಥಳೀಯ ವ್ಯಕ್ತಿಗಳಿಂದ ಹಣ ಫಂಡಿಂಗ್ ಆದ ಬಗೆಗೂ ತನಿಖೆ ನಡೆಸಲಾಗುತ್ತಿದೆ.
ಈ ಕೊಲೆಯಲ್ಲಿ ಭಾಗಿಗಳಾದ ಹಲವರಿಗೆ ನಿಷೇಧಿತ ಸಂಘಟನೆ ಪಿಎಫ್‌ಐ ನಂಟಿರುವ ಬಗ್ಗೆಯೂ ಅಧಿಕಾರಿಗಳಿಗೆ ಮಾಹಿತಿ ದೊರೆತಿದೆ. ಪಿಎಫ್‌ಐ ಜೊತೆಗೆ ಗುರುತಿಸಿಕೊಂಡು ಸದ್ಯ ವಿದೇಶದಲ್ಲಿರುವವರಿಂದ ಹಣ ರವಾನೆಯಾಗಿರುವ ಬಗೆಗೂ ಮಾಹಿತಿ ಲಭ್ಯವಾಗಿದೆ. ಆರೋಪಿಗಳು ಮಂಗಳೂರು ಮತ್ತು ವಿದೇಶಗಳಲ್ಲಿ ನೆಲೆಸಿರುವ ಕೆಲವರ ಮಾಹಿತಿಗಳನ್ನು ಅಧಿಕಾರಿಗಳಿಗೆ ನೀಡಿರುವುದಾಗಿಯೂ ತಿಳಿದು ಬಂದಿದೆ.
























