ಪುತ್ತೂರು: ಯುವತಿಯನ್ನು ವಂಚಿಸಿ ಗರ್ಭಿಣಿಯಾಗಿಸಿ ವಂಚಿಸಿದ ಯುವಕನ ಶೋಧ ಕಾರ್ಯ ಮುಂದುವರಿದಿದ್ದು, ಈ ನಡಿಗೆ ಯುವತಿ ನಿನ್ನೆ ರಾತ್ರಿ ಗಂಡು ಮಗಿವಿಗೆ ಜನ್ಮ ನೀಡಿದ್ದಾರೆ.
ಸಂತ್ರಸ್ತೆಯೂ ಜೂ 24 ರಂದು ರಾತ್ರಿ ಬಪ್ಪಳಿಗೆ ನಿವಾಸಿ ಇಂಜಿನಿಯರಿಂಗ್ ವಿದ್ಯಾರ್ಥಿಯೋರ್ವ ತನಗೆ ಮದುವೆಯಾಗುವುದಾಗಿ ನಂಬಿಸಿ ಇದೀಗ ಮದುವೆಯಾಗಲು ನಿರಾಕರಿಸಿರುವುದಾಗಿ ದೂರು ನೀಡಿದಂತೆ ನಗರ ಠಾಣೆಯಲ್ಲಿ ಅತ್ಯಾಚಾರ ಹಾಗೂ ನಂಬಿಕೆ ದ್ರೋಹದ ಪ್ರಕರಣ ದಾಖಲಿಸಿದ್ದರು.
ಸಂತ್ರಸ್ತ ಯುವತಿಯ ತಾಯಿ ಶುಕ್ರವಾರ ಪುತ್ತೂರಿನಲ್ಲಿ ಸುದ್ದಿಗೋಷ್ಠಿ ನಿಗದಿ ಮಾಡಿದ್ದರು. ಆದರೇ ನಿಗದಿತ ಸಮಯಕ್ಕೆ ಮಹಿಳೆ ಬಾರದೇ ಪತ್ರಿಕಾಗೋಷ್ಟಿ ರದ್ದಾಗಿತ್ತು. ಸಂತ್ರಸ್ತೆಗೆ ಆರೋಗ್ಯ ಸಮಸ್ಯೆಯೆಂಬ ಕಾರಣವನ್ನು ಕುಟುಂಬದ ಆಪ್ತ ವಲಯ ನೀಡಿತ್ತು. ಬೆಳಗ್ಗಿನಿಂದ ಯುವತಿಯ ಆರೋಗ್ಯದಲ್ಲಿ ಏರುಪೇರಾಗಿದ್ದು, ವೈದ್ಯರ ಸೂಚನೆಯಂತೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎನ್ನಲಾಗಿದೆ.
























