ಮಣ್ಣಗುಡ್ಡೆಯಲ್ಲಿ ಮತ್ತೆ ಭೂ ಕುಸಿತ | ರಸ್ತೆ ಮೇಲೆ ಮಣ್ಣಿನ ರಾಶಿ; ಸಂಚಾರಕ್ಕೆ ತಡೆ

ನೆಲ್ಯಾಡಿ: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ನೆಲ್ಯಾಡಿ ಸಮೀಪದ ಮಣ್ಣಗುಂಡಿಯಲ್ಲಿ ಮತ್ತೆ ಗುಡ್ಡ ಕುಸಿತ ಸಂಭವಿಸಿದೆ.

ಗುಡ್ಡ ಕುಸಿತದ ಪರಿಣಾಮ ರಸ್ತೆಯಲ್ಲಿ ಹಲವು ವಾಹನಗಳು ಸಾಲುಗಟ್ಟಿ ನಿಂತಿದ್ದು, ಸುಗಮ ಸಂಚಾರಕ್ಕೆ ತಡೆ ಉಂಟಾಗಿದೆ. ಮಂಗಳವಾರ ರಾತ್ರಿ ಕುಸಿತ ಸಂಭವಿಸಿದ ಸ್ಥಳದ ಸಮೀಪವೇ ಮತ್ತಷ್ಟು ಭೂಕುಸಿತವಾಗಿದೆ.

ಮಂಗಳವಾರ ಸಂಭವಿಸಿದ ಭೂಕುಸಿತದಿಂದ ಭಾರಿ ಪ್ರಮಾಣದ ಮಣ್ಣು ಮತ್ತು ಕಲ್ಲುಬಂಡೆಗಳು ರಸ್ತೆಗೆ ಉರುಳಿದ್ದು, ನಿನ್ನೆಯಷ್ಟೇ ಅದನ್ನು ತೆರವುಗೊಳಿಸುವ ಕಾರ್ಯಾಚರಣೆ ಪೂರ್ತಿಯಾಗಿತ್ತು. ಅದರ ಬೆನ್ನಿಗೆ ಇಂದು ಮತ್ತೆ ಕುಸಿದಿದೆ. ಇಲ್ಲಿ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ನಡೆಯುತ್ತಿದ್ದು, ಇನ್ನಷ್ಟು ಕುಸಿಯುವ ಭೀತಿಯಿದೆ.





















































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top