ಕಾವೇರಿ ನದಿ ಪಾತ್ರದ ಪ್ರವಾಸಿ ತಾಣಗಳಿಗೆ ನಿರ್ಬಂಧ: ಕಾರಣ ಇಲ್ಲಿದೆ

ಮೈಸೂರು: ಕೆಆರ್‌ ಎಸ್ ಡ್ಯಾಮ್‌ ನ ಕೆಳಗಿರುವ ಕಾವೇರಿ ನದಿ ಪಾತ್ರದ ಪ್ರವಾಸಿ ತಾಣಗಳಿಗೆ ನಿರ್ಬಂಧ ಹೇರಲಾಗಿದ್ದು, ಪ್ರವಾಹದ ಭೀತಿಯಿಂದ ಈ ಕ್ರಮಕ್ಕೆ ಶ್ರೀರಂಗಪಟ್ಟಣ ತಹಶೀಲ್ದಾರರು ಆದೇಶ ಹೊರಡಿಸಿದ್ದಾರೆ.

ಪ್ರವಾಸಿ ತಾಣಗಳಾದ ಬಲಮುರಿ, ಎಡಮುರಿ, ಸ್ನಾನಘಟ್ಟ, ಸಂಗಮ, ನಿಮಿಷಾಂಭ ದೇಗುಲ, ಘೋಸಾಯ್ ಘಾಟ್‌ಗಳ ಪ್ರವೇಶಕ್ಕೆ ಪ್ರವಾಸಿಗರಿಗೆ ನಿರ್ಬಂಧ ಹಾಕಲಾಗಿದೆ. ಹಾಗೆಯೇ ಕಾವೇರಿ ತಟದಲ್ಲಿ ನಡೆಸುವ ಪಿಂಡ ಪ್ರಧಾನ ಕಾರ್ಯಕ್ಕೂ ನಿರ್ಬಂಧ ಅನ್ವಯವಾಗುತ್ತದೆ.

ಕಾವೇರಿ ನದಿಯ ಅಯಕಟ್ಟಿನ ಜಾಗಗಳಲ್ಲಿ ಪೊಲೀಸರನ್ನೂ ನಿಯೋಜನೆ ಮಾಡಲಾಗಿದೆ. ಕಾನೂನು ಉಲ್ಲಂಘನೆ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನೂ ನೀಡಲಾಗಿದೆ.





















































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top