ಸುಳ್ಯ: ಚಲಿಸುತ್ತಿದ್ದ ಕಾರೊಂದರ ಮೇಲೆ ಮರದ ಕೊಂಬೆ ಮುರಿದು ಬಿದ್ದ ಘಟನೆ ಸಂಪಾಜೆಯಲ್ಲಿ ನಡೆದಿದೆ.
ಮರದ ಕೊಂಬೆ ವಿನಯ್ ಎಂಬುವವರು ಮಾರುತಿ 800 ಕಾರಿನ ಮೇಲೆ ಬಿದ್ದಿದೆ. ಇದೇ ಸ್ಥಳದಿಂದ ಸ್ವಲ್ಪ ದೂರದಲ್ಲೇ ವಿದ್ಯಾರ್ಥಿಗಳು ಪ್ರತಿನಿತ್ಯ ಮುಂಜಾನೆ ಆಟೋ ಹತ್ತುತ್ತಿದ್ದು ಅಲ್ಲಿಯೂ ಮರದ ಕೊಂಬೆ ಮುರಿದು ಬಿದ್ದಿದೆ. ಅದೃಷ್ಟವಶಾತ್ ಈ ಸಮಯದಲ್ಲಿ ಅವರು ಆಟೋ ಹತ್ತಿದ್ದು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.
ಈ ಕೊಂಬೆ ಮುರಿದ ಮರಗಳು ಖಾಸಗಿ ಜಾಗದೊಳಗಿದ್ದು, ಇದನ್ನು ತೆರವು ಮಾಡಲು ಕೆಲವು ನಿಯಮಗಳಿವೆ ಎಂದು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರು ಮಾಹಿತಿ ನೀಡಿದ್ದಾರೆ. ಈ ಭಾಗದಲ್ಲಿನ ಸರ್ಕಾರಿ ಅರಣ್ಯದಲ್ಲಿರುವ ಅಪಾಯಕಾರಿ ಮರಗಳ ತೆರವಿಗೆ ಗುರುತು ಕಾರ್ಯ ನಡೆಯುತ್ತಿದೆ ಎಂದು ತಿಳಿದು ಬಂದಿದೆ.
























