ಇಸ್ರೇಲ್‌ಗೆ ನೆರವಾದ ಮೂವರನ್ನು ನೇಣಿಗೇರಿಸಿದ ಇರಾನ್‌

ಸಮರ ವಿರಾಮದ ಬೆನ್ನಿಗೆ ದೇಶದ್ರೋಹಿಗಳ ಬೇಟೆ; 700 ಮಂದಿ ಸೆರೆ

ಟೆಹ್ರಾನ್‌ : ಸಮರ ವಿರಾಮ ಜಾರಿಗೆ ಬಂದ ಮರುದಿನವೇ ಇರಾನ್‌ ತನ್ನಲ್ಲಿರುವ ದೇಶದ್ರೋಹಿಗಳ ವಿರುದ್ಧ ಕಾರ್ಯಾಚರಣೆ ಶುರುಮಾಡಿದ್ದು, ಇಸ್ರೇಲ್‌ ಪರ ಬೇಹುಗಾರಿಕೆ ಮಾಡಿದ ಆರೋಪದಲ್ಲಿ ಮೂವರನ್ನು ನೇಣಿಗೇರಿಸಿದೆ.

ಇಸ್ರೇಲ್‌ ಮತ್ತು ಇರಾನ್‌ ನಡುವೆ 12 ದಿನಗಳಿಂದ ನಡೆಯುತ್ತಿದ್ದ ಭೀಕರ ಯುದ್ಧ ಶಾಂತಿ ಮಾತುಕತೆಯ ಬಳಿಕ ನಿನ್ನೆ ಕೊನೆಗೊಂಡಿದೆ. ಇದರ ಬೆನ್ನಿಗೆ ಇರಾನ್‌ ಸರ್ಕಾರ ಇಸ್ರೇಲ್‌ಗೆ ನೆರವಾಗಿರುವವರ ಬೇಟೆಯಾಡಲು ಪ್ರಾರಂಭಿಸಿದೆ. ನಿನ್ನೆಯೇ ಇಸ್ರೇಲ್‌ನ ಬೇಹುಪಡೆ ಮೊಸಾದ್‌ಗೆ ನೆರವಾದ ಆರೋಪದಲ್ಲಿ ಮೂವರನ್ನು ಸೆರೆ ಹಿಡಿದಿತ್ತು. ಅವರನ್ನು ಇಂದು ನೇಣಿಗೆ ಏರಿಸಲಾಗಿದೆ ಎಂದು ಇರಾನ್‌ನ ಅಧಿಕೃತ ಮಾಧ್ಯಮ ವರದಿ ತಿಳಿಸಿದೆ.





















































 
 

ಈ ಮೂವರು ಇಸ್ರೇಲ್‌ ನಿಖರ ದಾಳಿ ನಡೆಸಲು ಸಾಧ್ಯವಾಗಿರುವ ಮಾಹಿತಿಗಳನ್ನು ರವಾನಿಸಿದ್ದರು. ಹೀಗಾಗಿ ಅವರನ್ನು ದೇಶದ್ರೋಹಿಗಳು ಎಂದು ಪರಿಗಣಿಸಿ ನೇಣಿಗೇರಿಸಲಾಗಿದೆ. ಇನ್ನೂ 700ಕ್ಕೂ ಅಧಿಕ ಜನರನ್ನು ಬಂಧಿಸಲಾಗಿದ್ದು, ಅವರ ವಿಚಾರಣೆ ನಡೆಯುತ್ತಿದೆ ಎಂದು ವರದಿ ತಿಳಿಸಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top