ಅಳದಂಗಡಿ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಅರ್ಥಶಾಸ್ತ್ರ ಉಪನ್ಯಾಸಕರಾಗಿರುವ ಹರೀಶ್ ರೈ ಅವರು ಜೂ 30 ರಂದು ವಯೋನಿವೃತ್ತಿ ಹೊಂದುತ್ತಿದ್ದಾರೆ.
ಭಾರತೀಯ ಭೂಸೇನೆಯಲ್ಲಿ ಪ್ರಾಧ್ಯಾಪಕರಾಗಿ ಸೇವೆಗೆ ಸೇರಿದ ಇವರು ಅಸ್ಸಾಂ, ಜಬಲ್ಪುರ್, ಪಠಾಣ್ ಕೋಟ್, ಪಚ್ಮುರಿ, ಬೆಂಗಳೂರು ಮೊದಲಾದ ಕಡೆಗಳಲ್ಲಿ ಸೇವೆ ಸಲ್ಲಿಸಿದ್ದು ರಕ್ಷಕ್ ಮತ್ತು ಕಾರ್ಗಿಲ್ ಯುದ್ಧವು ಸೇರಿ ಹಲವು ಸೇನಾ ಕಾರ್ಯಾಚರಣೆಗಳಲ್ಲಿ ಭಾಗವಹಿಸಿದ್ದು 2009ರಲ್ಲಿ ನಿವೃತ್ತಿ ಹೊಂದಿದ್ದಾರೆ.
ಬಳಿಕ ಉಜಿರೆಯ ಎಸ್ ಡಿ ಎಂ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕರಾಗಿ,ಮಚ್ಚಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲರಾಗಿ, 2013 ರಿಂದ ಅರ್ಥಶಾಸ್ತ್ರ ಉಪನ್ಯಾಸಕರಾಗಿ ಲಿಂಗಸಗೂರು ಮತ್ತು ಅಳದಂಗಡಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಒಟ್ಟು 12 ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದ್ದಾರೆ.
ರೋಟರಿ, ಎಂ ಆರ್ ಪಿ ಎಲ್ ಮತ್ತು ದಾನಿಗಳ ಸಹಕಾರದಿಂದ ಸಂಸ್ಥೆಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಇವರ ಪ್ರಯತ್ನಿಸಿದ್ದಾರೆ. ಉಜಿರೆ ನಿವಾಸಿಯಾಗಿರುವ ಇವರು ಪತ್ನಿ ಭಾರತಿ, ಹಿರಿಯ ಪುತ್ರಿ ಡಾ. ಅಭಿಜ್ಞ ರೈ, ಅಳಿಯ ಡಾ. ನವೀನ್ ಪಕ್ಕಳ , ಕಿರಿಯ ಪುತ್ರಿ ಶುಭಜ್ಞ ರೈ ಇಂಜಿನಿಯರ್ ಆಗಿದ್ದಾರೆ
























