ಶಿವರಾಜ್‍ ಮತ್ತಿಲ್ಲ ಆತ್ಮಹತ್ಯೆ

ಬೆಳ್ತಂಗಡಿ : ಉಜಿರೆ, ಧರ್ಮಸ್ಥಳ ಭಾಗದಲ್ಲಿ ಸದಾ ತನ್ನ ಬೈಕ್ ನಲ್ಲಿ ನಾಯಿಯೊಂದನ್ನು ಕೂರಿಸಿಕೊಂಡು ಸಂಚರಿಸುತ್ತಿದ್ದ ಶಿವರಾಜ್ ಮತ್ತಿಲ್ಲ ಇಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಗ್ರಾಮದಲ್ಲಿ ಟೋಯಿಂಗ್ ವಾಹನ, ಕೃಷಿ, ಕೂಲಿ ಕಾರ್ಮಿಕನಾಗಿ ಕೆಲಸ ಮಾಡಿಕೊಂಡಿದ್ದ ಶಿವರಾಜ್ ಅವರಿಗೆ ತನ್ನ ಪ್ರೀತಿಯ ಶ್ವಾನವೇ ಎಲ್ಲಾ. ಬೆಳಗ್ಗೆ ಹಾಗೂ ಸಂಜೆ ಎರಡು ಹೊತ್ತು ತನ್ನ ಪ್ರೀತಿಯ ನಾಯಿಯೊಂದಿಗೆ ನಗರವನ್ನು ಒಂದೆರಡು ರೌಂಡ್ ಹಾಕಿಲ್ಲ ಎಂದರೆ ಸಮಾಧಾನ ಇರುತ್ತಿರಲಿಲ್ಲ.

ಅಷ್ಟೇ ಅಲ್ಲದೆ ನಾಯಿಯೊಂದಿಗೆ ಬೈಕ್ ನಲ್ಲಿ ಸಂಚರಿಸುತ್ತಿದ್ದ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಕೂಡ ಆಗಿತ್ತು, ಇದೀಗ ಶಿವರಾಜ್ ಆತ್ಮಹತ್ಯೆಗೆ ಶರಣಾಗಿದ್ದು, ಆತ್ಮಹತ್ಯೆಗೆ ನಿಖರ ಕಾರಣವೇನೆಂದು ತನಿಖೆಯ ಬಳಿಕವೇ ತಿಳಿದು ಬರಬೇಕಿದೆ.





















































 
 

ಇನ್ನು ಈ ಹಿಂದೆ ಕೂಡ ಒಂದೆರಡು ಬಾರಿ ಶಿವರಾಜ್ ಆತ್ಮಹತ್ಯೆಗೆ ಯತ್ನಿಸಿದ್ದ ಎನ್ನಲಾಗಿದೆ. ಇದೀಗ ಮಗನನ್ನು ಕಳೆದುಕೊಂಡ ತಾಯಿಯ ಆಕ್ರಂದನ ಮುಗಿಲು ಮುಟ್ಟಿದೆ. ಸದ್ಯ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top