ದೇಶ ಬಿಟ್ಟು ಹೋಗಿ ಇಲ್ಲವೇ ಸಾಯಲು ತಯಾರಾಗಿ : 20 ಕಮಾಂಡರ್‌ಗಳಿಗೆ ಎಚ್ಚರಿಕೆ ನೀಡಿದ ಮೊಸಾದ್‌

ಸಂಬಂಧಿಕರಿಗಿಂತ ನಾವು ನಿಮಗೆ ಬಹಳ ಹತ್ತಿರದಲ್ಲಿದ್ದೇವೆ; ಜೀವ ಉಳಿಸಿಕೊಳ್ಳಲು ಕೊನೆಯ ಆಯ್ಕೆ ಎಂದು ಧಮ್ಕಿ

ಟೆಹ್ರಾನ್‌: ಕದನ ವಿರಾಮ ಒಪ್ಪಂದವಾಗಿಲ್ಲ ಎಂದು ಇರಾನ್‌ ಹೇಳಿದ ಬೆನ್ನಿಗೆ 12 ಗಂಟೆಯ ಒಳಗಡೆ ಇರಾನ್‌ ತೊರೆಯಿರಿ. ಇಲ್ಲದಿದ್ದರೆ ನಿಮ್ಮನ್ನು ಹತ್ಯೆ ಮಾಡಲಾಗುವುದು ಎಂದು ಇರಾನ್‌ನ ಸೇನೆ ಇಸ್ಲಾಮಿಕ್ ರೆವೊಲ್ಯೂಷನರಿ ಗಾರ್ಡ್ ಕಾರ್ಪ್ಸ್‌ನ 20 ಕಮಾಂಡರ್‌ಗಳಿಗೆ ಇಸ್ರೇಲ್‌ ಗುಪ್ತಚರ ಸಂಸ್ಥೆ ಮೊಸಾದ್‌ ಕರೆ ಮಾಡಿ ನೇರ ಎಚ್ಚರಿಕೆ ನೀಡಿದೆ.
ಐಆರ್‌ಜಿಸಿಯ ಕಮಾಂಡರ್‌ಗೆ ಮೊಸಾದ್‌ ಅಧಿಕಾರಿ ಕರೆ ಮಾಡಿ ಬೆದರಿಕೆ ಹಾಕುತ್ತಿರುವ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ನಿಮ್ಮ ಪತ್ನಿ ಮತ್ತು ಮಕ್ಕಳೊಂದಿಗೆ ಜೀವ ಸಹಿತ ತಪ್ಪಿಸಿಕೊಳ್ಳಲು ನಿಮಗೆ 12 ಗಂಟೆಗಳ ಸಮಯವಿದೆ ಎಂದು ನಾನು ಈಗ ನಿಮಗೆ ಸಲಹೆ ನೀಡಬಲ್ಲೆ. ನೀವು ಈಗ ನಮ್ಮ ಪಟ್ಟಿಯಲ್ಲಿದ್ದೀರಿ. ನಿಮ್ಮ ಕುಟುಂಬದ ಮೇಲೆ ನಾವು ಯಾವುದೇ ಕ್ಷಣದಲ್ಲಿ ದಾಳಿ ಮಾಡಬಹುದು. ನಿಮ್ಮ ಸಂಬಂಧಿಕರಿಗಿಂತ ನಾವು ನಿಮಗೆ ಬಹಳ ಹತ್ತಿರದಲ್ಲಿದ್ದೇವೆ. ಈಗಾಗಲೇ ನಿಮ್ಮ ಹಲವು ಕಮಾಂಡರ್‌, ವಿಜ್ಞಾನಿಗಳನ್ನು ನಾವು ಹತ್ಯೆ ಮಾಡಿರುವುದು ನಿಮಗೆ ಗೊತ್ತಿರಬಹುದು. ನಿಮ್ಮನ್ನು ಹತ್ಯೆ ಮಾಡುವುದು ನಮಗೆ ಕಷ್ಟದ ಕೆಲಸವಲ್ಲ. ನಿಮ್ಮ ಪತ್ನಿ ಮತ್ತು ಮಕ್ಕಳೊಂದಿಗೆ ಜೀವ ಉಳಿಸಿಕೊಳ್ಳಲು ನಿಮಗೆ ಕೊನೆಯ ಆಯ್ಕೆ ನೀಡುತ್ತಿದ್ದೇವೆ ಎಂದು ಆಡಿಯೋದಲ್ಲಿ ಎಚ್ಚರಿಕೆ ನೀಡಲಾಗಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top