ನಿತ್ಯ ಚಪಾತಿಯ ರಾಧಾಕೃಷ್ಣರಿಗೆ ಕಲ್ಕೂರ ಕೃಷಿಕ ಸಿರಿ ಪ್ರಶಸ್ತಿ

ಮಂಗಳೂರು: ಕದ್ರಿ ಕಂಬಳ ರಸ್ತೆಯ ಮಲ್ಲಿಕಾ ಬಡಾವಣೆಯಲ್ಲಿರುವ ‘ ‘ಮಂಜು ಪ್ರಾಸಾದ’ದಲ್ಲಿ ಜೂನ್ 21 ಮತ್ತು 22ರಂದು ಕಲ್ಕೂರ ಪ್ರತಿಷ್ಠಾನದವರು ಆಯೋಜಿಸಿದ್ದ ‘ಹಲಸು – ಮಾವು ಮೇಳ’ದಲ್ಲಿ ನಿತ್ಯ ಚಪಾತಿ’ಯ ರಾಧಾಕೃಷ್ಣರಿಗೆ ‘ಕಲ್ಕೂರ ಕೃಷಿಕ ಸಿರಿ’ ಪ್ರಶಸ್ತಿ ಲಭಿಸಿದೆ.

 ಶ್ರೀ ವಿದ್ಯೇಂದ್ರ ತೀರ್ಥ ಸ್ವಾಮೀಜಿಯವರ ದಿವ್ಯ ಹಸ್ತದಿಂದ ಈ ಪ್ರತಿಷ್ಠಿತ ಪ್ರಶಸ್ತಿ ಪ್ರದಾನವಾಯಿತು.

ಸಂಶೋಧನಾತ್ಮಕ ಉತ್ಪನ್ನಕ್ಕಾಗಿ ಸಂದ ಪ್ರಶಸ್ತಿ





















































 
 

ಚಪಾತಿ ಮತ್ತು ಸಿರಿಧಾನ್ಯ ಹಾಗೂ ಅವು ಕುಕ್ಕೀಸ್ ಮೂಲಕ ಮನೆಮಾತಾಗಿರುವ ರಾಧಾಕೃಷ್ಣರು ಇತ್ತೀಚೆಗೆ ಹಲಸಿನ ಬೀಜದ ಮೌಲ್ಯವರ್ಧನೆ ಮಾಡುವ ಕುಕ್ಕೀಸ್’ನ್ನು ತಯಾರಿಸಿ ಮಾರುಕಟ್ಟೆಗೆ ತಂದಿದ್ದಾರೆ. ಇದು ಕೃಷಿಕರಿಗೆ ಸುಸ್ಥಿರ ಆದಾಯ ಗಳಿಸುವಲ್ಲಿ ಸಹಕಾರಿಯಾಗಿದ್ದು ಗ್ರಾಹಕರಿಗೆ ಸಮೃದ್ಧ ಪೌಷ್ಟಿಕಾಂಶವುಳ್ಳ ಆರೋಗ್ಯಕರ ಆಹಾರವನ್ನು ಒದಗಿಸುತ್ತಿದೆ. ಹಲಸಿನ ಇಂತಹ ಮೌಲ್ಯವರ್ಧನೆಯು ಒಂದು ಸಂಶೋಧನಾತ್ಮಕ ಉತ್ಪನ್ನವಾಗಿದೆ.

ವೇದಿಕೆಯಲ್ಲಿ ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷರಾದ ಪ್ರದೀಪ್ ಕುಮಾರ್ ಕಲ್ಕೂರ ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top