ಕಾರ್ಕಳ: ಮುಡಾರಿನ ಅಹಿಂಸಾ ಅನಿಮಲ್ ಕೇರ್ ನಿಂದ ಮೂರು ದನಗಳನ್ನು ಕದ್ದ ಮೂವರು ಕಳ್ಳರ ಪೈಕಿ ಓರ್ವ ಪೊಲೀಸರ ವಶವಾಗಿದ್ದಾನೆ.
ಬಂಧಿತ ಆರೋಪಿಯನ್ನು ಸಲೀಂ(38) ಎಂದು ಗುರುತಿಸಲಾಗಿದೆ. ಕೃತ್ಯಕ್ಕೆ ಬಳಕೆ ಮಾಡಿದ ವಾಹನವನ್ನು ವಶಕ್ಕೆ ಪಡೆದಿರುವ ಪೊಲೀಸರು ಇನ್ನಿಬ್ಬರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಗಂಗೊಳ್ಳಿ ಸಮೀಪ ಸ್ಕೂಟರಿನಲ್ಲಿ ದನದ ಮಾಂಸ ಸಾಗಿಸುತ್ತಿದ್ದ ಆರೋಪಿ ಪೊಲೀಸ್ ಬಲೆಗೆ ಬಿದ್ದಿದ್ದಾನೆ. ರಹೀಮ್ (35) ಎಂಬವನೇ ಬಂಧಿತ ಆರೋಪಿ. ಈತನಿಂದ 25 ಕೆಜಿ ಗೋಮಾಂಸ ಮತ್ತು ಕೃತ್ಯಕ್ಕೆ ಬಳಸಿದ ಸ್ಕೂಟರ್ ವಶಕ್ಕೆ ಪಡೆಯಲಾಗಿದೆ. ಈತ ಗಂಗೊಳ್ಳಿಯಲ್ಲಿ ಬೇರೊಂದು ಪ್ರಕರಣದಲ್ಲಿಯೂ ಭಾಗಿಯಾಗಿದ್ದು, ಈ ಸಂಬಂಧ ಪೊಲೀಸರು ಮತ್ತೊಂದು ಕೇಸು ದಾಖಲಿಸಿದ್ದಾರೆ.
























