ನವದೆಹಲಿ: ಜಗತ್ತಿನಲ್ಲಿ ಯುದ್ಧದ ಪರಿಸ್ಥಿತಿ ಹೆಚ್ಚಾಗುತ್ತಿದೆ. ಶತ್ರು ರಾಷ್ಟ್ರ ಪಾಕಿಸ್ತಾನ ಭಾರತದ ಮೇಲೆ ಆಗಾಗ್ಗೆ ಭಯೋತ್ಪಾದಕ ದಾಳಿಗಳನ್ನು ಮಾಡುತ್ತಿದೆ. ಚೀನಾ ಸಹ ತನ್ನ ಗಡಿ ವಿಸ್ತರಣೆ ಮಾಡುವ ನಿಟ್ಟಿನಲ್ಲಿ ಕುತಂತ್ರಗಳನ್ನು ಮಾಡುತ್ತಿದೆ. ಈ ಎಲ್ಲಾ ಕಾರಣಗಳಿಗಾಗಿ ಭಾರತ ತನ್ನ ಸೇನಾ ಬಲ, ಶಸ್ತ್ರಾಸ್ತ್ರಗಳ ಬಲವನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದ್ದು, ಈ ನಿಟ್ಟಿನಲ್ಲಿ ಪ್ರಸ್ತುತ ಭಾರತೀಯ ಸೇನೆಗೆ ಪಿನಾಕ ಎಂಬ ಪ್ರಬಲ 6 ರಾಕೆಟ್ ಅಸ್ತ್ರಗಳನ್ನು ಸೇರ್ಪಡೆ ಮಾಡಿಕೊಳ್ಳುತ್ತಿದೆ.
2026 ರ ವೇಳೆಗೆ ಈ ರಾಕೆಟ್‌ಗಳ ಲಾಂಚರ್‌ಗಳು ಆರು ಹೆಚ್ಚುವರಿ ರೆಜಿಮೆಂಟ್‌ಗಳ ನಿಯೋಜನೆಯನ್ನು ಸಹ ಸಂಪೂರ್ಣ ಮಾಡಲಿವೆ.
ಈಗಾಗಲೇ ಸೇನೆಯಲ್ಲಿ ಎರಡು ರೆಜಿಮೆಂಟ್ ಗಳ ಸೇವೆ ಇದ್ದು, ಇನ್ನೆರಡು ರೆಜಿಮೆಂಟ್ ಗಳ ಸೇರ್ಪಡೆ ಪ್ರಕ್ರಿಯೆ ನಡೆಯುತ್ತಿದೆ. ಇದಕ್ಕಾಗಿ ಉಪಕರಣಗಳನ್ನು ಸ್ವೀಕರಿಸಲಾಗಿದ್ದು, ಯೋಧರಿಗೂ ತರಬೇತಿ ನೀಡಲು ಶೀಘ್ರದಲ್ಲೇ ಪ್ರಾರಂಭ ಮಾಡಲಾಗುತ್ತದೆ ಎಂದು ರಕ್ಷಣಾ ವಲಯದ ಮೂಲಗಳು ಮಾಹಿತಿ ನೀಡಿದೆ.
























