ಕನ್ಯಾಡಿ ಯಕ್ಷಭಾರತಿಯಿಂದ ವಿಶ್ವ ಯೋಗ ದಿನಾಚರಣೆ

ಕನ್ಯಾಡಿ ಯಕ್ಷಭಾರತಿ ವತಿಯಿಂದ ವಿಶ್ವ ಯೋಗ ದಿನಾಚರಣೆ ಕನ್ಯಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಸಭಾಭವನ ದಲ್ಲಿ ಜರಗಿತು.

ದೇವಸ್ಥಾನದ ಸಮಿತಿ ಅಧ್ಯಕ್ಷ ಹರೀಶ ರಾವ್ ಯಂ. ಕಾರ್ಯಕ್ರಮ ಉದ್ಘಾಟಿಸಿ ಮಾನಾಡಿ,  ಯೋಗದ ನಿತ್ಯ ಅನುಷ್ಠಾನದಿಂದ ಸ್ವಸ್ತ ಮನಸ್ಸು ಮತ್ತು ಅರೋಗ್ಯ ಹೊಂದಲು ಸಾಧ್ಯವೆಂದರು.

 ಉಜಿರೆಯ ಎಸ್ ಡಿ ಎಂ ಯೋಗ ಮತ್ತು ಪ್ರಕೃತಿ ಚಿಕಿತ್ಸೆ ವಿದ್ಯಾಲಯದ ಡಾ ಅಭಿಷೇಕ್ ಪೂಜಾರಿ, ಯೋಗದ ಅಷ್ಟಾಂಗಗಳ ಬಗ್ಗೆ ಮಾಹಿತಿ ನೀಡಿ ಸರಳವಾಗಿ ಮಾಡುವ ಯೋಗ ಕ್ರಿಯೆಗಳ ಪ್ರಾತ್ಯಕ್ಷಿಕೆಯನ್ನು ನೀಡಿ ಪ್ರಶ್ನೆಗಳಿಗೆ ಉತ್ತರಿಸಿದರು.





















































 
 

ಯಕ್ಷ ಭಾರತಿಯ ಟ್ರಸ್ಟಿಗಳಾದ ಹರಿದಾಸ ಗಾಂಭೀರ್ ಧರ್ಮಸ್ಥಳ, ಮಹೇಶ ಕನ್ಯಾಡಿ, ಸೂರ್ಯನಂದ ರಾವ್, ಕುಸುಮಕರ ಕುತ್ತೋಡಿ ಸಹಕಾರ ನೀಡಿದರು.

 ಯಕ್ಷ ಭಾರತಿ ಅಧ್ಯಕ್ಷ ರಾಘವೇಂದ್ರ ಬೈಪಾಡಿಕ್ತಾಯ ಸ್ವಾಗತಿಸಿ ಕಾರ್ಯದರ್ಶಿ ದಿವಾಕರ ಆಚಾರ್ಯ ಗೇರುಕಟ್ಟೆ ಕಾರ್ಯಕ್ರಮ ನಿರೂಪಿಸಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top