ಕುದ್ಮಾರು ಹಿ.ಪ್ರಾ.ಶಾಲೆಯಲ್ಲಿ ವಿದಾಯ ಕೂಟ, ಸನ್ಮಾನ ಮತ್ತು ಧ್ವಜ ಕಟ್ಟೆಯ ಲೋಕಾರ್ಪಣೆ

ಕುದ್ಮಾರು: ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಕುದ್ಮಾರು ಇಲ್ಲಿನ ಮುಖ್ಯ ಶಿಕ್ಷಕ ಕುಶಾಲಪ್ಪ ಬರೆಮೇಲು ಅವರು ವಯೋನಿವೃತ್ತಿ ಹೊಂದಿದ ಹಿನ್ನೆಲೆಯಲ್ಲಿ ಅವರಿಗೆ ಸನ್ಮಾನ ಮತ್ತು ವಿದಾಯ ಕೂಟವನ್ನು ಜೂ.21 ಶನಿವಾರ ಏರ್ಪಡಿಸಲಾಗಿತ್ತು.

ಸಮಾರಂಭದ ಅಧ್ಯಕ್ಷತೆಯನ್ನು ಬೆಳಂದೂರು ಗ್ರಾಮ ಪಂಚಾಯತ್’ನ ಅಧ್ಯಕ್ಷೆ ತೇಜಾಕ್ಷಿ ಕೊಡಂಗೆ ಇವರು ವಹಿಸಿದ್ದರು. ಉದ್ಘಾಟಕರಾಗಿ ಕುಶಾಲಪ್ಪ ಬಿ. ಇವರ ಗುರುಗಳಾದ ರಾಮಚಂದ್ರ ಗೌಡ ಪೆರಿಂಜೆ ಇವರು ಆಗಮಿಸಿದ್ದರು.

ಅಭಿನಂದನೆ ಸಲ್ಲಿಕೆಗಾಗಿ ಉದ್ದನೆಯ ಸಾಲು, ಹಾರ-ಶಾಲುಗಳ ರಾಶಿಗಳು





















































 
 

ಅಭಿನಂದನಾ ಭಾಷಣಗೈದ ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್, ಪುತ್ತೂರು ಇದರ ಆಡಳಿತಾಧಿಕಾರಿ ಗುಡ್ಡಪ್ಪ ಬಲ್ಯ  ಇವರು ಮಾತನಾಡುತ್ತಾ ಕುಶಾಲಪ್ಪರ ವ್ಯಕ್ತಿತ್ವದ ಅನಾವರಣ ಮಾಡಿದರು. ಸರಳ, ಸಜ್ಜನ, ಶಿಸ್ತುಬದ್ಧ, ಸ್ಥಿರಚಿತ್ತ, ತಾಳ್ಮೆಯ ಸಾಕಾರ ಮೂರ್ತಿಯಾಗಿದ್ದ ಅವರ ಕಾರ್ಯವೈಖರಿ ಇವೆಲ್ಲವುದರ ಬಗ್ಗೆ ವಿಶದಪಡಿಸಿದರು. ಈ ದಿನ ಅವರು ಪಡೆದ ಅಭಿನಂದನೆಯ ಸಾಲು, ಹಾರ – ಶಾಲುಗಳ ರಾಶಿಗಳು ಇವರ ವ್ಯಕ್ತಿತ್ವದ ಕೈಗನ್ನಡಿ ಎಂಬುದನ್ನು ವರ್ಣಿಸಿದರು. ಅತಿಥಿಗಳು ಸಂದರ್ಭೋಚಿತವಾಗಿ ಮಾತನಾಡಿದರು.

ಅತಿಥಿಗಳಾಗಿ ಪುತ್ತೂರಿನ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್., ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಚಕ್ರಪಾಣಿ, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ವಿಷ್ಣು ಪ್ರಸಾದ್, ಕ್ಷೇತ್ರ ಸಮನ್ವಯಾಧಿಕಾರಿ ನವೀನ್ ಸ್ಟೀಫನ್ ವೇಗಸ್, ರಾಮನಗರ ಜಿಲ್ಲಾ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸುಂದರ ಗೌಡ, ಪ್ರಾಥಮಿಕ ಶಾಲಾ ಮುಖ್ಯ ಗುರುಗಳ ಸಂಘದ ಜಿಲ್ಲಾಧ್ಯಕ್ಷ ನಿಂಗರಾಜು, ಕಡಬ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರಾಮಕೃಷ್ಣ ಮಲ್ಲಾರ, ಸವಣೂರು ಕ್ಲಸ್ಟರ್ ಸಿ.ಆರ್.ಪಿ. ಜಯಂತ್ ವೈ., ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ,  ಎಸ್.ಡಿ.ಎಂ.ಸಿ. ಅಧ್ಯಕ್ಷ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ದೇವರಾಜ ನೂಜಿ, ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಮೇದಪ್ಪ ಗೌಡರೊಂದಿಗೆ. ಕಾರ್ಯಕ್ರಮದ ಕೇಂದ್ರ ಬಿಂದುಗಳಾದ ಕುಶಾಲಪ್ಪ ಮತ್ತು ಅವರ ಪತ್ನಿ ಶ್ರೀಮತಿ ಗೀತಾ ಕುಮಾರಿ ಡಿ., ಶಾಲಾ ಪ್ರಭಾರ ಮುಖ್ಯ ಗುರುಗಳಾದ ಶ್ರೀಲತಾ ಉಪಸ್ಥಿತರಿದ್ದರು.

ಬೃಹತ್ ಜನಸ್ತೋಮ

ಕಾರ್ಯಕ್ರಮದಲ್ಲಿ ವಿವಿಧ ಶಾಲೆಗಳ ಮುಖ್ಯ ಗುರುಗಳು, ಸಹ ಶಿಕ್ಷಕರುಗಳು, ವಿವಿಧ ಸಂಘಗಳ ಪದಾಧಿಕಾರಿಗಳು, ಊರ ವಿದ್ಯಾ ಅಭಿಮಾನಿಗಳು, ಎಸ್‌ಡಿಎಂಸಿಯ ಮಾಜಿ ಅಧ್ಯಕ್ಷರುಗಳು, ಕುದ್ಮಾರು ಹಾಗೂ ಅಕ್ಕಪಕ್ಕದ ಇತರ ಶಾಲೆಗಳ ನಿವೃತ್ತ ಮುಖ್ಯ ಗುರುಗಳು, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರು, ಬೆಳಂದೂರು ಪಂಚಾಯತ್ ಸದಸ್ಯರುಗಳು, ಸಿಬ್ಬಂದಿ ವರ್ಗ, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಊರಿನ ದಾನಿಗಳು, ಕುಶಾಲಪ್ಪರ ಹಿಂದಿನ ಶಾಲೆಯ ಸಹೋದ್ಯೋಗಿ ಮಿತ್ರರು, ಸ್ನೇಹಿತರು, ಹಿತೈಷಿಗಳು ಆಗಮಿಸಿ ಅವರಿಗೆ ಅಭಿನಂದನೆಯನ್ನು ಸಲ್ಲಿಸಿದರು.

ಪ್ರಭಾರ ಮುಖ್ಯ ಗುರುಗಳಾದ ಶ್ರೀಮತಿ ಶ್ರೀಲತಾ ಸ್ವಾಗತಿಸಿ  ಮೇದಪ್ಪ ಗೌಡ ಕೂವೆತ್ತೋಡಿ ವಂದಿಸಿದರು. ಶಿಕ್ಷಕಿ ವೀಣಾ ಕೆ. ಕಾರ್ಯಕ್ರಮವನ್ನು ನಿರೂಪಿಸಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top