ಕಡಬ: ತಾಲೂಕಿನ ಪುಣ್ಚಪ್ಪಾಡಿ ಹಿರಿಯ ಪ್ರಾಥಮಿಕ ಶಾಲೆ, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ, ಹಿರಿಯ ವಿದ್ಯಾರ್ಥಿ ಸಂಘ ಹಾಗೂ ಶಾಲಾ ಶತಮಾನೋತ್ಸವ ಸಮಿತಿ ನೇತೃತ್ವದಲ್ಲಿ ಸುಳ್ಯ ಕೆವಿಜಿ ದಂತ ಕಾಲೇಜು ಹಾಗೂ ಆಸ್ಪತ್ರೆ ಸಹಯೋಗದಲ್ಲಿ, ಪುಣ್ಚಪ್ಪಾಡಿ ಸಮರ್ಥ ಜನಸೇವಾ ಟ್ರಸ್ಟ್, ಸವಣೂರು ಸೇವಾ ಭಾರತಿ ಸಹಕಾರದೊಂದಿಗೆ ಉಚಿತ ದಂತ ಚಿಕಿತ್ಸಾ ಶಿಬಿರ ಜೂ.22 (ನಾಳೆ) ಭಾನುವಾರ ಪುಣ್ಚಪ್ಪಾಡಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ.
ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 1 ಗಂಟೆ ತನಕ ನಡೆಯುವ ಶಿಬಿರದಲ್ಲಿ ದಂತ ಕುಳಿ ತುಂಬುವಿಕೆ, ಹಲ್ಲು ಕೀಳುವಿಕೆ, ಹಲ್ಲಿನ ಸ್ವಚ್ಛತೆ, ಕೃತಕ ದಂತ ಜೋಡಣೆ ಸೌಲಭ್ಯವಿದೆ.
ಹೆಚ್ಚಿನ ಸಂಖ್ಯೆಯಲ್ಲಿ ಶಿಬಿರದಲ್ಲಿ ಪಾಲ್ಗೊಂಡು ಶಿಬಿರದ ಸದುಪಯೋಗ ಪಡೆಯುವಂತೆ ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
























