ಕನಸಿನಲ್ಲಿ ಬಂದ ಆಂಜನೇಯ : ಹಿಂದೂ ಧರ್ಮಕ್ಕೆ ಮರಳಿದ ಇಡೀ ಕುಟುಂಬ

ಕೆಲ ವರ್ಷಗಳ ಹಿಂದೆ ಮತಾಂತರಗೊಂಡಿದ್ದ ಕುಟುಂಬ

ಬೆಂಗಳೂರು: ಕ್ರೈಸ್ತ ಧರ್ಮಕ್ಕೆ ಮತಾಂತರವಾಗಿದ್ದ ಕುಟುಂಬವೊಂದು ಕನಸಿನಲ್ಲಿ ಹನುಮಾನ್‌ ಬಂದ ಬಳಿಕ ಹಿಂದೂ ಧರ್ಮಕ್ಕೆ ಘರ್ ವಾಪ್ಸಿ ಮಾಡಿರುವ ಘಟನೆ ಯಾದಗಿರಿಯಲ್ಲಿ ನಡೆದಿದೆ. ಗಿರಿನಗರ ಕಾಲೊನಿಯಲ್ಲಿರುವ ಬುಡ್ಡ ಜಂಗಮ ಸಮಾಜದ ವೆಂಕಟೇಶ್ ಎಂಬವರು ತಮ್ಮ ಕುಟುಂಬದ ಸಮೇತ ಕ್ರೈಸ್ತ ಧರ್ಮಕ್ಕೆ ಮತಾಂತರವಾಗಿದ್ದರು.

ಇದೀಗ ಮರಳಿ ಹಿಂದೂ ಧರ್ಮಕ್ಕೆ ಮರಳಿದ್ದಾರೆ. ಇದಕ್ಕೆ ಕಾರಣವಾಗಿದ್ದು ಆಂಜನೇಯ. ಕನಸಿನಲ್ಲಿ ಆಂಜನೇಯ ಪ್ರತ್ಯಕ್ಷನಾಗಿ ಹಿಂದೂ ಧರ್ಮಕ್ಕೆ ಮರಳಿ ಬರುವಂತೆ ಹೇಳಿದ್ದು ಇದೇ ಕಾರಣಕ್ಕೆ ಮರಳಿ ಬಂದಿದ್ದಾಗಿ ವೆಂಕಟೇಶ್ ಹೇಳಿದ್ದಾರೆ. ಕೆಲ ವರ್ಷಗಳ ಹಿಂದೆ ಹಿಂದೂ ಧರ್ಮ ತೊರೆದಿದ್ದ ವೆಂಕಟೇಶ್ ತಮ್ಮ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದರು.





















































 
 

ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ ನಂತರ ವೆಂಕಟೇಶ್ ಕುಟುಂಬಕ್ಕೆ ಮೇಲಿಂದ ಮೇಲೆ ಪೆಟ್ಟು ಬೀಳಲು ಆರಂಭಿಸಿತಂತೆ. ಯಾವುದೂ ಕೈಹಿಡಿತಿರಲಿಲ್ಲವಂತೆ. ಇದರ ನಡುವೆ ವೆಂಕಟೇಶ್ ಕನಸಿನಲ್ಲಿ ಆಂಜನೇಯ ಸ್ವಾಮಿ ಬಂದು ಹಿಂದೂ ಧರ್ಮಕ್ಕೆ ಮರಳುವಂತೆ ಆದೇಶ ನೀಡುತ್ತಿದ್ದನಂತೆ. ಇದೇ ಕಾರಣಕ್ಕೆ ಇದೀಗ ವೆಂಕಟೇಶ್ ಕ್ರೈಸ್ತ ಧರ್ಮ ತೊರೆದು, ಮತ್ತೆ ಹಿಂದೂ ಧರ್ಮಕ್ಕೆ ಮರಳಿದ್ದಾಗಿ ಹೇಳಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top