ಜೂ. 21: ಆಂಧ್ರ ಪ್ರದೇಶದಲ್ಲಿ ಪ್ರಧಾನಿ ಮೋದಿ ಅವರಿಂದ ಯೋಗ ದಿನಾಚರಣೆ

ಅಮರಾವತಿ: ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ  ಆಂಧ್ರಪ್ರದೇಶದಲ್ಲಿ ಜೂನ್ 21 ರಂದು ಆಯೋಜನೆ ಮಾಡಲಾಗಿರುವ ಯೋಗದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಲಿದ್ದಾರೆ.

ವಿಶಾಖಪಟ್ಟಣಂನ ಆರ್‌ ಕೆ ಬೀಚ್‌ ನಿಂದ ಭೋಗಪುರಂ ವರೆಗಿನ 26 ಕಿ ಮೀ ಕಾರಿಡಾರ್‌ ನಲ್ಲಿ ನಡೆಯಲಿರುವ ಈ ಕಾರ್ಯಕ್ರಮ ನಡೆಯಲಿದ್ದು, ಸುಮಾರು 3 ಲಕ್ಷ ಜನರು ಭಾಗವಹಿಸುವ ನಿರೀಕ್ಷೆ ಇದೆ. ಬೆಳಗ್ಗೆ 6.30 ರಿಂದ ತೊಡಗಿ 8 ಗಂಟೆಯ ವರೆಗೆ ನಡೆಯಲಿರುವ ಈ ಯೋಗ ದಿನಾಚರಣೆ ಗಿನ್ನಿಸ್ ಸೇರಿದಂತೆ ಹಲವಾರು ದಾಖಲೆಗಳನ್ನು ಬರೆಯಲಿದೆ ಎಂದು ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ತಿಳಿಸಿದ್ದಾರೆ.

ಹನ್ನೊಂದನೇ ವಿಶ್ವ ಯೋಗ ದಿನಾಚರಣೆಯನ್ನು ‘ಒಂದು ಭೂಮಿಗಾಗಿ, ಒಂದು ಆರೋಗ್ಯಕ್ಕಾಗಿ’ ಎನ್ನುವ ಧ್ಯೇಯದ ಜೊತೆಗೆ ಆಚರಣೆ ಮಾಡಲಾಗುತ್ತಿದ್ದು ಪ್ರಪಂಚದಾದ್ಯಂತ ಈ ದಿನವನ್ನು ಆಚರಣೆ ಮಾಡಲಾಗುತ್ತದೆ.





















































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top