ಭಾನುವಾರವೂ ನಡೆಯುವುದಿಲ್ಲ ಶುಭಾಂಶು ಶುಕ್ಲ ಗಗನ ಯಾತ್ರೆ

ಆ್ಯಕ್ಸಿಯಂ–4 ಮಿಷನ್‌ ಉಡಾವಣೆ ಮತ್ತೆ ಅನಿರ್ದಿಷ್ಟಾವಧಿಗೆ ಮುಂದೂಡಿಕೆ

ನವದೆಹಲಿ: ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲ ಅವರನ್ನು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್‌ಎಸ್‌) ಕಳುಹಿಸುವ ಮಹತ್ವಾಕಾಂಕ್ಷೆಯ ಆ್ಯಕ್ಸಿಯಂ–4 ಮಿಷನ್ ಮತ್ತೆ ಮುಂದೂಡಿಕೆಯಾಗಿದೆ. ಜೂನ್ 22ರಂದು ನಡೆಯಬೇಕಿದ್ದ ಉಡಾವಣೆಯನ್ನು ಮುಂದೂಡಲು ನಾಸಾ ನಿರ್ಧರಿಸಿದ್ದು, ಹೊಸ ಉಡಾವಣಾ ದಿನಾಂಕವನ್ನು ಸದ್ಯದಲ್ಲೇ ತಿಳಿಸಲಾಗುವುದು ಎಂದು ನಾಸಾ ಮೂಲಗಳು ತಿಳಿಸವೆ.

ಬಾಹ್ಯಾಕಾಶ ನಿಲ್ದಾಣದ ಕಾರ್ಯಾಚರಣೆಗಳನ್ನು ಮೌಲ್ಯಮಾಪನ ಮಾಡುವುದನ್ನು ಮುಂದುವರಿಸಲು ಬಾಹ್ಯಾಕಾಶ ಸಂಸ್ಥೆಗೆ ಹೆಚ್ಚುವರಿ ಸಮಯ ಬೇಕಾಗುತ್ತದೆ. ಬಾಹ್ಯಾಕಾಶ ನಿಲ್ದಾಣದ ಪರಸ್ಪರ ಸಂಪರ್ಕಿತ ಮತ್ತು ಪರಸ್ಪರ ಅವಲಂಬಿತ ವ್ಯವಸ್ಥೆಗಳ ಕಾರಣದಿಂದಾಗಿ, ನಿಲ್ದಾಣವು ಹೆಚ್ಚುವರಿ ಸಿಬ್ಬಂದಿ ಸದಸ್ಯರಿಗೆ ಸಿದ್ಧವಾಗಿದೆ ಎಂದು ಖಚಿತಪಡಿಸಿಕೊಳ್ಳಲು ನಾಸಾ ಬಯಸುತ್ತಿದ್ದು, ಈ ಕುರಿತ ಮಾಹಿತಿ ಪರಿಶೀಲಿಸಲು ಬಾಹ್ಯಾಕಾಶ ಸಂಸ್ಥೆಗೆ ಕಾಲಾವಕಾಶ ತೆಗೆದುಕೊಳ್ಳುತ್ತಿದೆ. ಹೀಗಾಗಿ ಜೂ.22ರಂದು ಆರಂಭಿಸಬೇಕಿದ್ದ ಅಂತರಿಕ್ಷಯಾನವನ್ನು ಮುಂದೂಡಿಕೆ ಮಾಡಲಾಗುತ್ತಿದ್ದು, ಹೊಸ ಉಡಾವಣಾ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುತ್ತದೆ ಎಂದು ತಿಳಿಸಿದೆ.





















































 
 

ಜೂನ್‌ 11ರಂದು ಫ್ಲೋರಿಡಾದಲ್ಲಿರುವ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಸ್ಪೇಸ್‌ಎಕ್ಸ್‌ನ ಫಾಲ್ಕನ್‌–9 ರಾಕೆಟ್‌ ಅನ್ನು ಉಡಾವಣೆ ಮಾಡಬೇಕಿತ್ತು. ಆದರೆ, ರಾಕೆಟ್‌ನಲ್ಲಿ ಇಂಧನ ಸೋರುತ್ತಿದ್ದ ಕಾರಣ ಕೊನೆಯ ಕ್ಷಣದಲ್ಲಿ ಉಡಾವಣೆಯನ್ನು ರದ್ದು ಮಾಡಲಾಗಿತ್ತು. ಮೇ 29, ಜೂನ್‌ 8 ಜೂನ್10 ಮತ್ತು ಜೂನ್ 19ರಂದು ಸಹ ರಾಕೆಟ್‌ ಉಡಾವಣೆಗೆ ದಿನಾಂಕ ನಿಗದಿ ಮಾಡಿ ಆನಂತರ ಮುಂದೂಡಲಾಗಿತ್ತು. ಉಡಾವಣೆ ಹಲವು ಬಾರಿ ಮುಂದೂಡಿಕೆ ಬಳಿಕ ಜೂನ್ 22ಕ್ಕೆ ಮತ್ತೆ ಸಮಯ ನಿಗದಿ ಮಾಡಲಾಗಿತ್ತು. ಇದೀಗ, ಆ ಸಮಯವನ್ನು ರದ್ದು ಮಾಡಲಾಗಿದೆ.

ಗಗನಯಾತ್ರಿಗಳು ತಮ್ಮ ಎರಡು ವಾರಗಳ ವಾಸದ ಅವಧಿಯಲ್ಲಿ, ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಶೂನ್ಯ ಗುರುತ್ವಾಕರ್ಷಣೆಯಲ್ಲಿ ಈ ಅಧ್ಯಯನ ಕೈಗೊಳ್ಳಲಿದ್ದಾರೆ. ‘ಸೂಟ್ ರೈಡ್’ ಎಂಬ ಹೆಸರು ಹೊಂದಿರುವ ಈ ಪ್ರಯೋಗ, ಇನ್ಸುಲಿನ್ ಅವಲಂಬಿತ ಗಗನಯಾತ್ರಿಗಳಿಗೆ (ಐಡಿಡಿಎಂ) ನೆರವಾಗುವ ನಿಟ್ಟಿನಲ್ಲಿ ಬಹುಮುಖ್ಯ ಪ್ರಯೋಗವಾಗಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top