ಜೂ.22ರಂದು ಮುಳಿಯ ಗೋಲ್ಡ್ & ಡೈಮಂಡ್ಸ್ ವತಿಯಿಂದ ಅಪ್ಪ-ಮಗ ಹಾಗೂ ಅಪ್ಪ-ಮಗಳು ವಿಶೇಷ ರೀತಿಯ ಅನುಬಂಧದ ಕಾರ್ಯಕ್ರಮ

ಪುತ್ತೂರು: ಮುಳಿಯ ಗೋಲ್ಡ್ ಅಂಡ್ ಡೈಮಂಡ್ಸ್ ವತಿಯಿಂದ Father’s Day ಅಂಗವಾಗಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಮುಳಿಯ ಗೋಲ್ಡ್ ಅಂಡ್ ಡೈಮಂಡ್ಸ್ ನಲ್ಲಿ ಚಿನ್ನದಂತ ಅಪ್ಪ ನನ್ನ ಅಪ್ಪ ಶೀರ್ಷಿಕೆಯಡಿ ಅಪ್ಪ-ಮಗ ಹಾಗೂ ಅಪ್ಪ-ಮಗಳು ಎಂಬ ವಿಶೇಷ ರೀತಿಯ ಅನುಬಂಧದ ಕಾರ್ಯಕ್ರಮವನ್ನು ಜೂನ್ 22 ರಂದು  ಏರ್ಪಡಿಸಲಾಗಿದೆ.

ವಿನೂತನ ಆಟಗಳು, ಪ್ರಶ್ನೋತ್ತರಗಳು, ಅಂತರಾತ್ಮದ ಮಾತುಗಳು ಈ ಕಾರ್ಯಕ್ರಮದ ವಿಶೇಷತೆಗಳಾಗಿವೆ. ಹಾಗೆಯೇ ಅಪ್ಪ-ಮಕ್ಕಳ ಅನುಬಂಧದ ಕುರಿತಾಗಿ ಹೊಸದಾಗಿ ಮಾಡಿದ 30 ಸೆಕೆಂಡುಗಳ ವೀಡಿಯೋವನ್ನು 9353030916 ಸಂಖ್ಯೆಗೆ ಕಳುಹಿಸುವಂತೆ ಕೋರಲಾಗಿದೆ.

22 ರಂದು ಸಂಜೆ 4 ಗಂಟೆಯಿಂದ ಮುಳಿಯ ಗೋಲ್ಡ್ ಅಂಡ್ ಡೈಮಂಡ್ಸ್ ನ ಎಲ್ಲ ಶಾಖೆಗಳಲ್ಲಿ ಈ ವಿಶೇಷ ಕಾರ್ಯಕ್ರಮ ನಡೆಯಲಿದೆ. ಕುಟುಂಬ ಸಮೇತರಾಗಿ ಬಂದು ಆನಂದಿಸುವ ವರ್ಣಮಯ ಸಮಯ ಇದಾಗಿದೆ. ಇದರ ಜತೆಗೆ ಖ್ಯಾತ ಮಾತುಗಾರ ವಿಠಲ್ ನಾಯಕ್ ಇವರಿಂದ ನಗೆ-ನುಡಿ ಕಾರ್ಯಕ್ರಮವನ್ನೂ ಆಯೋಜಿಸಲಾಗಿದೆ.





















































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top