ಸವಣೂರು: ಭಾರತೀಯ ಜನತಾ ಪಾರ್ಟಿ ಸುಳ್ಯ ಮಂಡಲ, ಸವಣೂರು, ಪುಣ್ಚಪ್ಪಾಡಿ, ಪಾಲ್ತಾಡಿ ಶಕ್ತಿ ಕೇಂದ್ರ, ಸವಣೂರು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘ ಹಾಗೂ ಸವಣೂರು ಯುವಕ ಮಂಡಲದ ಸಹಯೋಗದಲ್ಲಿ ವಿಶ್ವ ಯೋಗ ದಿನಾಚರಣೆ ಜೂ.21 ಶನಿವಾರ ನಡೆಯಲಿದೆ.
ಒಂದು ಭೂಮಿ, ಒಂದು ಆರೋಗ್ಯಕ್ಕಾಗಿ ಯೋಗ ಎಂಬ ಧ್ಯೇಯ ವಾಕ್ಯದೊಂದಿಗೆ ಸವಣೂರು ಯುವ ಸಭಾಭವನದಲ್ಲಿ ನಡೆಯುವ ಯೋಗ ದಿನಾಚರಣೆ ಬೆಳಿಗ್ಗೆ 6.30 ರಿಂದ ಆರಂಭಗೊಳ್ಳಲಿದ್ದು, ಸಂಪನ್ಮೂಲ ವ್ಯಕ್ತಿಯಾಗಿ ಪುತ್ತೂರು ಓಂಕಾರ ಯೋಗ ಕೇಂದ್ರದ ಕರುಣಾಕರ ಉಪಾಧ್ಯಾಯ ಪಾಲ್ಗೊಳ್ಳಲಿದ್ದಾರೆ.
ಯೋಗದಲ್ಲಿ ಪಾಲ್ಗೊಳ್ಳುವವರು ಯೋಗಕ್ಕೆ ಸರಿ ಹೊಂದುವ ಉಡುಪು ಧರಿಸಬೇಕು, ಹಾಸಲು ಜಮಖಾನ ತರಬೇಕು ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
























