ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ’ಬುನಾದಿ ಶಿಕ್ಷಣ’ ಪಠ್ಯ ವಿಷಯದ ತರಬೇತು ಕಾರ್ಯಾಗಾರ

ಪುತ್ತೂರು: ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ನಡೆದ ಎರಡು ದಿನಗಳ ಚಟುವಟಿಕಾಧಾರಿತ ಶಿಶು ಶಿಕ್ಷಣ ಹಾಗೂ ಬುನಾದಿ ಶಿಕ್ಷಣದ ಕುರಿತ ಜಿಲ್ಲಾ ಮಟ್ಟದ ಕಾರ್ಯಾಗಾರ ಸಂಪನ್ನಗೊಂಡಿತು.

ವಿದ್ಯಾಭಾರತಿ ಕರ್ನಾಟಕದೊಂದಿಗೆ ಸಂಲಗ್ನಗೊಂಡ 44 ವಿದ್ಯಾಮಂದಿರಗಳ ಸಹ ಶಿಕ್ಷಕರಿಗೆ ಕಾರ್ಯಾಗರದ ಪ್ರಥಮ ದಿನದ ಉದ್ಘಾಟನೆ ನೆರವೇರಿಸಿದ ವಿವೇಕಾನಂದ ವಿದ್ಯಾವರ್ಧಕ  ಸಂಘದ ಕಾರ್ಯದರ್ಶಿ ಡಾ. ಕೆ.ಎಂ ಕೃಷ್ಣ ಭಟ್‌ ಮಾತನಾಡಿ, ವ್ಯಕ್ತಿ ಜೀವನದ ಪ್ರಮುಖ ಘಟ್ಟದ ಅನುಭವ ಜನ್ಯ ಕಲಿಕೆ ವ್ಯಕ್ತಿ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.ಈ ದಿಶೆಯಿಂದ ನಿರಂತರ ತರಬೇತು ಶಿಕ್ಷಕರ ಕಾರ್ಯಕುಶಲತೆಯನ್ನು ವೃದ್ಧಿಸುತ್ತದೆ ಎಂದರು.

ಶಾಲಾ ಅಧ್ಯಕ್ಷ ರಮೇಶ್ಚಂದ್ರ ಎಂ. ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕಿ  ಆಶಾ ಬೆಳ್ಳಾರೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಎರಡನೇ ದಿನ ವಿದ್ಯಾಸಂಸ್ಥೆಗಳ ಆಡಳಿತ ಮಂಡಳಿಯವರೊಂದಿಗೆ ’ಬುನಾದಿ ಶಿಕ್ಷಣದ ಪ್ರಸ್ತುತದ ಸವಾಲುಗಳು ಹಾಗೂ ಸಾಧ್ಯತೆಗಳ’ ಬಗ್ಗೆ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಕಲ್ಲಡ್ಕ ಪ್ರಭಾಕರ ಭಟ್‌ ಸಂವಾದ ನಡೆಸಿ ಸಮಾಪನ ಮಾತುಗಳನ್ನಾಡಿದರು. ವಿವೇಕಾನಂದ ವಿದ್ಯಾವರ್ಧಕ ಸಂಘದ ಸಹಕಾರ್ಯನಿರ್ವಹಣಾಧಿಕಾರಿ ವೆಂಕಟರಮಣ ರಾವ್, ಶಿಕ್ಷಣ ಸಂಯೋಜಕ ರಘುರಾಜ್‌ ಉಬರಡ್ಕ, ಶಾಲಾ ಸಂಚಾಲಕ ವಸಂತ ಸುವರ್ಣ, ಕೋಶಾಧಿಕಾರಿ ಅಶೋಕ ಕುಂಬ್ಳೆ, ಪ್ರಾಥಮಿಕ ವಿಭಾಗದ ನಳಿನಿ ವಾಗ್ಲೆ ಉಪಸ್ಥಿತರಿದ್ದರು. ಸಹಶಿಕ್ಷಕಿ ನಮಿತಾ ಹಾಗೂ ಸ್ವಾತಿ ಕಾರ್ಯಕ್ರಮ ನಿರೂಪಿಸಿದರು.





















































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top