ಸುಳ್ಯ : ತಾ.ಪಂ ಸಭಾಭವನದಲ್ಲಿ ನಡೆದ ಸುಂದರ ಭಾರತ ಟ್ರಸ್ಟ್ ಕೊಡಮಾಡಿದ ನೋಟ್ ಪುಸ್ತಕವನ್ನು ಮಂಗಳೂರು ಸಂಸದ ಕ್ಯಾ.ಬ್ರಿಜೇಶ್ ಚೌಟ ವೀರಮಂಗಲ ಪಿಎಂಶ್ರೀ ಶಾಲೆಗೆ ವಿತರಿಸಿ ಶುಭ ಹಾರೈಸಿದರು.
ಸುಳ್ಯ ಕ್ಷೇತ್ರದ ಮಾನ್ಯ ಶಾಸಕರಾದ ಕು. ಭಾಗೀರಥಿ ಮುರಳ್ಯ ಅಧ್ಯಕ್ಷತೆ ವಹಿಸಿದ್ದರು.
ಸುಳ್ಯ ತಾ.ಪಂ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ,ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಪ್ಪ, ಸುಳ್ಯ ನಗರಸಭಾಧ್ಯಕ್ಷರಾದ ಶಶಿಕಲಾ ಸುಂದರ ಭಾರತ ಟ್ರಸ್ಟ್ ಮುಖ್ಯಸ್ಥ ಪ್ರತಾಪ್ ಪರಾಶರ ಉಪಸ್ಥಿತರಿದ್ದರು.
























