ಸುರತ್ಕಲ್‌ : ಮೇಲ್ಸೇತುವೆಯಿಂದ ಸರ್ವಿಸ್‌ ರಸ್ತೆಗೆ ಬಿದ್ದ ಕಾರು

ಸುರತ್ಕಲ್‌: ಸುರತ್ಕಲ್‌ ಎನ್‌ಐಟಿಕೆ ಸಮೀಪ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಮೇಲ್ಸೇತುವೆಯಿಂದ ಕೆಳಗಿನ ರಸ್ತೆಗೆ ಬಿದ್ದ ಘಟನೆ ಭಾನುವಾರ ಸಂಭವಿಸಿದೆ. ಮಂಗಳೂರಿನಿಂದ ಉಡುಪಿ ಕಡೆ ತೆರಳುತ್ತಿದ್ದ ಕಾರನ್ನು ಕುಂದಾಪುರ ನಿವಾಸಿ ಪ್ರತ್ಯಕ್ಷ ಎಂಬವರು ಚಲಾಯಿಸುತ್ತಿದ್ದರು.

ಅಪಘಾತದಿಂದ ಅವರಿಗೆ ಯಾವುದೇ ಪ್ರಾಣಾಪಾಯವಾಗಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಪ್ರತ್ಯಕ್ಷ ಅವರು ಕೆಲಸದ ನಿಮಿತ್ತ ಮಂಗಳೂರಿಗೆ ಹೋಗಿ ಕುಂದಾಪುರಕ್ಕೆ ಹಿಂದಿರುಗುತ್ತಿದ್ದ ವೇಳೆ ರಾಷ್ಟ್ರೀಯ ಹೆದ್ದಾರಿ 66ರ ಎನ್‌ಐಟಿಕೆ ಬಳಿ ಏಕಾಏಕಿ ಬ್ರೇಕ್‌ ಹಾಕಿದ್ದಾರೆ. ಇದರಿಂದ ನಿಯಂತ್ರಣ ಕಳೆದುಕೊಂಡ ಕಾರು ಮೇಲ್ಸೇತುವೆಯಿಂದ ಕೆಳಗಿದ್ದ ಸರ್ವಿಸ್‌ ರಸ್ತೆಗೆ ಹಾರಿ ಪಲ್ಟಿಯಾಗಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top