ಕುತ್ತಾರ್‌ : 12ನೇ ಮಹಡಿಯಿಂದ ಬಿದ್ದು ಬಾಲಕಿ ಸಾವು

ಬಟ್ಟೆ ಒಣಗಲು ಹಾಕುವಾಗ ಆಯತಪ್ಪಿ ಬಿದ್ದ ವೈದ್ಯ ದಂಪತಿಯ ಪುತ್ರಿ

ಮಂಗಳೂರು: ಬಾಲಕಿ 12ನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿರುವ ದಾರುಣ ಘಟನೆ ತೊಕ್ಕೊಟ್ಟು ಸಮೀಪ ಕುತ್ತಾರ್‌ನಲ್ಲಿ ಗುರುವಾರ ತಡರಾತ್ರಿ ಸಂಭವಿಸಿದೆ. ಯೆನೆಪೋಯ ಆಸ್ಪತ್ರೆಯಲ್ಲಿ ವೈದ್ಯರಾಗಿರುವ ಡಾ.ಮುಮ್ತಾಜ್‌ ಅಹ್ಮದ್‌ ಮತ್ತು ಡಾ.ಕಮ್ರಾಜ್‌ ದಂಪತಿಯ ಪುತ್ರಿ 15ರ ಹರೆಯದ ಹಿಬಾ ಐಮನ್‌ ಸಾವಿಗೀಡಾಗಿರುವ ಬಾಲಕಿ

ಕುತ್ತಾರ್‌ನಲ್ಲಿರುವ ಸಿಲಿಕೋನಿಯಾ ಎಂಬ ಬಹುಮಹಡಿ ವಸತಿ ಸಂಕೀರ್ಣದ ಫ್ಲ್ಯಾಟ್‌ನಲ್ಲಿ ಈ ವೈದ್ಯ ದಂಪತಿ ವಾಸವಾಗಿದ್ದರು. ಇದೇ ಕಟ್ಟಡದಿಂದದ ಬಾಲಕಿ ಬಿದ್ದಿದ್ದಾಳೆ.



















































 
 

18 ಮಹಡಿಗಳ ಬೃಹತ್‌ ವಸತಿ ಸಂಕೀರ್ಣದ 12ನೇ ಮಹಡಿಯಲ್ಲಿ ವೈದ್ಯ ದಂಪತಿ ವಾಸವಾಗಿದ್ದು, ಗುರುವಾರ ರಾತ್ರಿ ಇಬ್ಬರೂ ರಾತ್ರಿ ಪಾಳಿಯ ಕರ್ತವ್ಯದಲ್ಲಿದ್ದರು ಎನ್ನಲಾಗಿದೆ. ಹಿಬಾ ಬಾಲ್ಕನಿಯಲ್ಲಿ ಸ್ಟೂಲ್‌ ಮೇಲೆ ನಿಂತು ಬೆಡ್‌ಶೀಟ್‌ ಒಣಗಲು ಹಾಕುತ್ತಿದ್ದಾಗ ಅಯತಪ್ಪಿ ಬಿದ್ದಿದ್ದಾಳೆ ಎಂದು ತಿಳಿದುಬಂದಿದೆ.

ಹಿಬಾ ಯೇನೆಪೋಯ ಶಾಲೆಯಲ್ಲಿ 10ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದಳು. ತಂದೆ ತಾಯಿ ಮತ್ತು ಸಹೋದರನನ್ನು ಅಗಲಿದ್ದಾಳೆ. ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top