ಪುತ್ತೂರು: ಸುಳ್ಯದ ನೀರಬಿದಿರೆಯಲ್ಲಿ ಹರೀಶ್ ರೈ ಉಬರಡ್ಕರ ಮಾಲಕತ್ವದ

ಮೆ. ಶ್ರೀ ಲಕ್ಷ್ಮೀ ವೆಂಕಟೇಶ ಸಾ ಮಿಲ್ ಸಾರ್ವಜನಿಕ ಸೇವೆಗಾಗಿ ತೆರೆದುಕೊಂಡಿತು.

ಉಬರಡ್ಕ ಮಿತ್ತೂರು ಗ್ರಾಮ ಪಂಚಾಯತ್’ನ ಸದಸ್ಯರೂ ಆಗಿರುವ ಹರೀಶರ ಕನಸಿನ ಯೋಜನೆಯಾದ ಈ ಮರದ ಕಾರ್ಖಾನೆಯು ಜೂನ್ 12ರಂದು ಬೆಳಿಗ್ಗೆ ಗಣಪತಿ ಹವನದೊಂದಿಗೆ ಪ್ರಾರಂಭವಾಗಿ ಧಾರ್ಮಿಕ ವಿಧಿಗಳೊಂದಿಗೆ ಮುಂದುವರೆದು ಶ್ರೀ ದೇವರ ಪೀಠ ಸ್ಥಾಪನೆ, ಯಂತ್ರ ಪ್ರತಿಷ್ಠಾಪನೆ ಸಹಿತವಾಗಿ ಸಂಪನ್ನಗೊಂಡಿತು.
ಪುತ್ತೂರಿನ ಸಮರ್ಪಣಾ ಚಾರಿಟೇಬಲ್ ಟ್ರಸ್ಟ್, ನ್ಯೂಸ್ ಪುತ್ತೂರು, ಪ್ರೇರಣಾ ಪ್ರಾಪರ್ಟೀಸ್, ಪ್ರೇರಣಾ ಡೆವಲಪರ್ಸ್ ಮತ್ತು ಪ್ರೇರಣಾ ಪುತ್ತೂರು ಇದರ ವಿವಿಧ ಪದಾಧಿಕಾರಿಗಳು ಮತ್ತು ಊರ – ಪರವೂರ ಆಹ್ವಾನಿತರು ಪಾಲ್ಗೊಂಡಿದ್ದರು.
























