ಬೆಳ್ತಂಗಡಿ: ವಾಗೀಶ್ ವಿ 68 ಅಫೀಷಿಯಲ್ ಅರ್ಪಿಸುವ ಸಸ್ಪೆನ್ಸ್ ಲವ್ ಸ್ಟೋರಿಯ ಪೋಸ್ಟರ್ ಮತ್ತು ಟ್ರೈಲರ್ ಜೂನ್ 8 ಭಾನುವಾರದಂದು ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬಿಡುಗಡೆಯಾಗಿದೆ.

ಸಮಾಜ ಸೇವಕ ,ಆಪತ್ಬಾಂದವ ಈಶ್ವರ್ ಮಲ್ಪೆ ಇವರು ಮೋಕೆದ ತಿರ್ಲ್ ಕಿರು ಸಸ್ಪೆನ್ಸ್ ಲವ್ ಸ್ಟೋರಿಯ ಪೋಸ್ಟರ್ ಹಾಗೂ ಟ್ರೈಲರ್ ಬಿಡುಗಡೆ ಮಾಡಿದ್ದಾರೆ. ಹಾಗೆಯೇ ಮೋಕೆದ ತಿರ್ಲ್ [True love (Fake love) =? ಎಂಬ ಕುತೂಹಲಕಾರಿಯಾದ ಸಿನಿಮಾ ಇದಾಗಿದೆ.

ಈ ಸಸ್ಪೆನ್ಸ್ ತುಳು ಲವ್ ಸ್ಟೋರಿಯ ಬಿಡುಗಡೆ ಯ ದಿನಾಂಕವನ್ನು ಅತೀ ಶೀಘ್ರದಲ್ಲಿ ತಿಳಿಸುತ್ತಾರೆ ಎಂದು ಮೋಕೆದ ತಿರ್ಲ್ ಕಿರುಚಿತ್ರದ ನಿರ್ದೇಶಕರಾದ ನಿರಂಜನ್ ಗೌಡ ಗುರುವಾಯನಕೆರೆ ಹಾಗೂ ನಿರ್ಮಾಪಕರಾದ ವಾಗೀಶ್ ವಿ ತುಂಬೆತಡ್ಕ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
























