ಪುತ್ತೂರು: ಚಲಿಸುತ್ತಿದ್ದ ಕಾರನ್ನು ನಿಲ್ಲಿಸಿ ಹಲ್ಲೆ ನಡೆಸಿದ ಘಟನೆ ಕೆದಿಲ ಗ್ರಾಮದ ಗಾಂಧಿನಗರದಲ್ಲಿ ನಡೆದಿದ್ದು, ಈ ಕುರಿತು ಪ್ರಕರಣ ದಾಖಲಗಿದೆ.
ಕೆದಿಲ ಗ್ರಾಮದ ಸರೋಳಿ ನಿವಾಸಿ ಅಬೂಬಕ್ಕರ್ ರಾಶಿಕ್ (28) ಹಲ್ಲೆಗೊಳಗಾದವರು ಎಂದು ತಿಳಿದು ಬಂದಿದೆ.
ತನ್ನ ಕಾರಿನಲ್ಲಿ ಮಾರಿಪಳ್ಳ ಎಂಬಲ್ಲಿಗೆ ಹೋಗಿ ಬರುತ್ತಿದ್ದ ಸಂದರ್ಭ ಕೆದಿಲ ಗ್ರಾಮದ ಗಾಂಧಿನಗರದಲ್ಲಿ ಶಾಫಿ ಗಡಿಯಾರ ಮತ್ತು ಜೆಸಿಬಿ ಸಿದ್ಧಿಕ್ ಎಂಬವರು ಕಾರನ್ನು ತಡೆದ ನಿಲ್ಲಿಸಿ. ಅವಾಚ್ಯವಾಗಿ ನಿಂದಿಸಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಗಾಯಾಳು ಅಬೂಬಕ್ಕರ್ ರಾಶಿಕ್ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಈ ಕುರಿತು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
























