ಸತತ ಮೂರನೇ ಸಲ ಬೆಲೆ ಇಳಿಸಿದ ತೈಲ ಕಂಪನಿಗಳು
ನವದೆಹಲಿ: ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ ಬೆಲೆ 24 ರೂಪಾಯಿ ಕಡಿಮೆಯಾಗಿದೆ. ಪರಿಷ್ಕೃತ ಬೆಲೆಗಳು 19 ಕೆಜಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್ಗೆ ಅನ್ವಯಿಸುತ್ತವೆ. ಹೊಸ ಪರಿಷ್ಕರಣೆ ಪ್ರಕಾರ ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್ನ ಬೆಲೆ 24 ರೂ. ಇಳಿಕೆಯಾಗಿದೆ. ಇದರ ಪರಿಣಾಮವಾಗಿ ಸಿಲಿಂಡರ್ ಬೆಲೆ ದೆಹಲಿ: 1,723.50 ರೂ. ಕೋಲ್ಕತ್ತಾ 1,826 ರೂ., ಮುಂಬೈನಲ್ಲಿ, ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಈಗ 1,674.50 ರೂ. ಆಗಿದೆ. ಚೆನ್ನೈನಲ್ಲಿ, ಎಲ್ಪಿಜಿ ಸಿಲಿಂಡರ್ನ ಬೆಲೆ ಇಂದಿನಿಂದ 1,881 ರೂ. ವಾಣಿಜ್ಯ ಸಿಲೆಂಡರ್ಗಳನ್ನು ಹೆಚ್ಚಾಗಿ ಹೊಟೆಲ್ ಹಾಗೂ ರೆಸ್ಟರೊಂಟ್ಗಳಲ್ಲಿ ಬಳಸಲಾಗುತ್ತಿದ್ದು, ಅವುಗಳಿಗೆ ಬೆಲೆ ಇಳಿಕೆಯಿಂದ ಅನುಕೂಲವಾಗಿದೆ.
ವಾಣಿಜ್ಯ ಎಲ್ಪಿಜಿ ಬೆಲೆಯಲ್ಲಿ ಸತತ ಮೂರನೇ ಮಾಸಿಕ ಕಡಿತ ಇದಾಗಿದೆ. ಮೇ ತಿಂಗಳ ಆರಂಭದಲ್ಲಿ ಸಾರ್ವಜನಿಕ ವಲಯದ ತೈಲ ಕಂಪನಿಗಳು 19 ಕೆಜಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್ನ ಬೆಲೆಯನ್ನು 14.50 ರೂ.ಗಳಷ್ಟು ಕಡಿಮೆ ಮಾಡಿದ್ದವು. ಅದಕ್ಕೂ ಮೊದಲು, ಏಪ್ರಿಲ್ 1 ರಂದು, ಪ್ರತಿ ಸಿಲಿಂಡರ್ಗೆ 41 ರೂ.ಗಳಷ್ಟು ಬೆಲೆಯನ್ನು ಕಡಿತಗೊಳಿಸಲಾಗಿತ್ತು.
ಈ ಪರಿಷ್ಕರಣೆಯಲ್ಲಿ ಮನೆಯ ಗೃಹ ಬಳಕೆಗೆ ಬಳಸುವ ದೇಶೀಯ ಎಲ್ಪಿಜಿ ಸಿಲಿಂಡರ್ಗಳ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಮಾರ್ಚ್ನಲ್ಲಿ ಎಲ್ಪಿಜಿ ಸಿಲಿಂಡರ್ಗಳ ಬೆಲೆಯನ್ನು 50 ರೂ. ಹೆಚ್ಚಿಸಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸುಂಕ ಘೋಷಣೆಗಳ ನಂತರ ಜಾಗತಿಕ ಕಚ್ಚಾ ತೈಲ ಬೆಲೆ ಏರಿಕೆ ಇದಕ್ಕೆ ಕಾರಣ ಎಂದು ಹೇಳಲಾಗಿತ್ತು. ಸ್ಥಳೀಯ ತೆರಿಗೆಗಳು ಮತ್ತು ಸಾರಿಗೆ ಶುಲ್ಕಗಳು ಬದಲಾಗುವುದರಿಂದ ರಾಜ್ಯಗಳಲ್ಲಿ ಎಲ್ಪಿಜಿ ಬೆಲೆಗಳು ಬದಲಾಗುತ್ತವೆ.
ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ), ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್), ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಎಚ್ಪಿಸಿಎಲ್) ಪ್ರತಿ ತಿಂಗಳ ಮೊದಲ ದಿನದಂದು ವಿಮಾನ ಟರ್ಬೈನ್ ಇಂಧನ (ಎಟಿಎಫ್) ಮತ್ತು ಅಡುಗೆ ಅನಿಲದ ಬೆಲೆಗಳನ್ನು ಪರಿಷ್ಕರಿಸುತ್ತವೆ. ಈ ಪರಿಷ್ಕರಣೆಗಳು ಸರಾಸರಿ ಅಂತಾರಾಷ್ಟ್ರೀಯ ಮಾನದಂಡ ಇಂಧನ ಬೆಲೆಗಳು ಮತ್ತು ವಿದೇಶಿ ವಿನಿಮಯ ದರದಲ್ಲಿನ ಏರಿಳಿತಗಳನ್ನು ಆಧರಿಸಿವೆ.
hpbiso