ಪುತ್ತೂರು: ಭಾರೀ ಮಳೆಯಿಂದಾಗಿ ಗೌರಿ ಹೊಳೆ ತುಂಬಿ ಹರಿಯುತ್ತಿದ್ದು ಸರ್ವೆ ಸೇತುವೆ ಸಂಪೂರ್ಣ ಮುಳುಗಡೆ ಹೊಂದಿದೆ.

ಸರ್ವೆ ಸೇತುವೆ ಸಂಪೂರ್ಣ ಮುಳುಗಡೆಯಾದ ಪರಿಣಾಮ ಸವಣೂರು ಸಂಪರ್ಕ ಸಂಪೂರ್ಣ ಕಡಿತ ಗೊಂಡಿದೆ.
ಸಂಪರ್ಕ ಕಡಿತಗೊಂಡ ಹಿನ್ನಲೆಯಲ್ಲಿ ವಾಹನ ಸವಾರರು ಪರದಾಡುವಂತಾಯಿತು. ಗೌರಿ ಹೊಳೆ ತುಂಬಿ ಸೇತುವೆ ಮುಳುಗಡೆಯಾಗಿ ಅಪಾಯ ಪರಿಸ್ಥಿತಿ ಉಂಟಾದರೂ ಸ್ಥಳಕ್ಕೆ ಪೊಲೀಸರು ಬರಲಿಲ್ಲ. ಮುಳುಗಡೆಯಾದ ಸ್ಥಳಕ್ಕೆ ಭಾರೀ ಸಂಖ್ಯೆಯಲ್ಲಿ ಜನ ಆಗಮಿಸಿದ್ದರು.
























