ದೇಶದ ಪ್ರಗತಿ ಮತದಾನದಿಂದ ನಿರ್ಧರಿತ | ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಇವಿಎಂ ಮತ್ತು ವಿವಿಪ್ಯಾಟ್‌ಗಳ ಭೌತಿಕ ಪ್ರದರ್ಶನ

ಪುತ್ತೂರು: ದೇಶದ ಪ್ರಗತಿಯನ್ನು ನಿರ್ಧರಿಸುವುದು ಮತದಾನ. ಆದ್ದರಿಂದ ಮತ ಚಲಾಯಿಸುವುದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯ. ಚುನಾವಣೆಯ ಗೆಲುವನ್ನು ನಿರ್ಧರಿಸುವಲ್ಲಿ ಪ್ರತಿಯೊಂದು ಅಭ್ಯರ್ಥಿಯ ಮತದಾನ ಮುಖ್ಯ ಎಂದು ಪರೀಕ್ಷಾಂಗ ಕುಲ ಸಚಿವ ಮತ್ತುಕನ್ನಡ ವಿಭಾಗ ಮುಖ್ಯಸ್ಥ ಡಾ. ಹೆಚ್.ಜಿ. ಶ್ರೀಧರ್ ಹೇಳಿದರು.

ಮತದಾರರ ಸಾಕ್ಷರತಾ ಘಟಕ, ತಾಲೂಕು ಕಛೇರಿ ಪುತ್ತೂರು, ವಿವೇಕಾನಂದ ಕಲಾ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ)ದ ಮತದಾನ ಸಾಕ್ಷರತಾ ಸಮಿತಿ, ಪೊಲಿಟಿಕಲ್ ಫಾರಂ, ಎನ್.ಎಸ್.ಎಸ್, ಎನ್.ಸಿ.ಸಿ., ರೋವರ್ ರೇಂಜರ್ಸ್, ಮತ್ತು ರೆಡ್‌ಕ್ರಾಸ್‌ ಇದರ ಸಹಯೋಗದಲ್ಲಿ ಹಮ್ಮಿಕೊಂಡ ಇವಿಎಂ ಮತ್ತು ವಿವಿ ಪ್ಯಾಟ್‌ಗಳ ಭೌತಿಕ ಪ್ರದರ್ಶನ ಮತ್ತು ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅತಿ ಹೆಚ್ಚು ಜನರು ಚುನಾವಣೆ ಮಾಡಬೇಕು ಎನ್ನುವುದು ಚುನಾವಣಾ ಆಯೋಗದ ಅಭಿಲಾಷೆ. ಅದಕ್ಕೆ ನಾವೆಲ್ಲ ಕೈಜೋಡಿಸಬೇಕು. ಮತದಾನದಲ್ಲಿ ಯುವಜನಾಂಗದ ಪಾತ್ರ ಬಹಳ ಮುಖ್ಯವಾಗಿದ್ದು, ಇದರಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದರು.



































 
 

ಕಾರ್ಯಕ್ರಮದಲ್ಲಿ ಚುನಾವಣಾ ಶಾಖೆಯ ಉಪ ತಹಶೀಲ್ದಾರ್ ಸುಲೋಚನ ಪಿ.ಕೆ. ಮಾತನಾಡಿ, ವಿದ್ಯಾರ್ಥಿಗಳಿಗೆ ಚುನಾವಣೆಯ ಬಗ್ಗೆ ತಿಳಿಸಿ ಇವಿಎಂ ಮತ್ತು ವಿವಿಪ್ಯಾಟ್‌ ಕಾರ್ಯ ನಿರ್ವಹಿಸುವುದರ ಬಗ್ಗೆ ಮಾಹಿತಿ ನೀಡಿದರು.

ಚುನಾವಣಾ ಶಾಖಾ ಸಿಬ್ಬಂದಿ ಬಾಲಕೃಷ್ಣ ಗೌಡ ಮತ್ತು ರಾಧಾಕೃಷ್ಣ ಗೌಡ ಉಪಸ್ಥಿತರಿದ್ದರು. ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಶ್ರೀಧರ್ ನಾಯಕ್ ಬಿ. ಸ್ವಾಗತಿಸಿ, ರಾಜ್ಯಶಾಸ್ತ್ರ ವಿಭಾಗದ ಉಪನ್ಯಾಸಕಿ ಕವಿತಾ ವಂದಿಸಿದರು. ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕ ಡಾ.ವಿಷ್ಣು ಕುಮಾರ್‌ ಎ. ಕಾರ್ಯಕ್ರಮ ನಿರೂಪಿಸಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top