ಕಾಶ್ಮೀರ : ಭದ್ರತಾ ಪಡೆಯಿಂದ ಇನ್ನೊಂದು ದೊಡ್ಡ ಉಗ್ರ ಬೇಟೆ

4-5 ಭಯೋತ್ಪಾದಕರ ವಿರುದ್ಧ ನಡೆಯುತ್ತಿದೆ ತೀವ್ರ ಕಾಳಗ

ಶ್ರೀನಗರ: ಜಮ್ಮು-ಕಾಶ್ಮೀರದ ಕಿಷ್ತ್ವರ್‌ ಜಿಲ್ಲೆಯ ಛತ್ರೂವಿನ ಸಿಂಘ್‌ಪುರ ಎಂಬಲ್ಲಿ ಗುರುವಾರ ನಸುಕಿನ ಹೊತ್ತು ಉಗ್ರರ ಜೊತೆ ಭದ್ರತಾ ಪಡೆಯ ತೀವ್ರ ಕಾಳಗ ಶುರುವಾಗಿದೆ.

ಇಲ್ಲಿ 4-5 ಉಗ್ರರು ಇರುವ ಮಾಹಿತಿ ಇರುವ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಪ್ರಾರಂಭಿಸಲಾಗಿದೆ. ತೀವ್ರ ಎನ್‌ಕೌಂಟರ್‌ ನಡೆಯುತ್ತಿದ್ದು, ಗುಂಡಿನ ಚಕಮಕಿ ಪ್ರಾರಂಭವಾಗಿದೆ ಎಂದು ಮೂಲಗಳು ತಿಳಿಸಿವೆ. ಇಡೀ ಪ್ರದೇಶದಲ್ಲಿ ಹೈಅಲರ್ಟ್‌ ಘೋಷಿಸಿ ಭದ್ರತಾ ಪಡೆಗಳು ಸುತ್ತುವರಿದಿವೆ. ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ.



















































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top