ಆಪರೇಷನ್ ಸಿಂದೂರ್ | ಕನ್ನಡ ಪತ್ರಕರ್ತನ ಸೋದರ ಸಂಬಂಧಿಯ ಪತ್ನಿ ಫಿನಿಷ್ !

ಕಾಶ್ಮೀರ: ಪಾಕಿಸ್ತಾನದ ಉಗ್ರರ ದಾಳಿಗೆ ಪ್ರತೀಕಾರವಾಗಿ ನಡೆದ ಭಾರತೀಯ ಸೇನೆಯ ದಾಳಿಯಲ್ಲಿ ಕರ್ನಾಟಕದ ದಿನಪತ್ರಿಕೆಯೊಂದರ ಸಂಪಾದಕರ ಕುಟುಂಬದ ಮಹಿಳೆಯೊಬ್ಬಳು ಸಾವನ್ನಪ್ಪಿರುವ ಬಗ್ಗೆ ತಿಳಿದುಬಂದಿದೆ.

ಈ ಕುರಿತು ಫೇಸ್‍ ಬುಕ್‍ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹರಡಿದ್ದು, ಇದು ಸತ್ಯವೋ ಅಥವಾ ಸತ್ಯಕ್ಕೆ ದೂರವಾದದ್ದೋ ಎಂಬುದು ಇನ್ನೂ ತಿಳಿಯಬೇಕಾಗಿದೆ.

ಸ್ಥಳೀಯ ಪತ್ರಿಕೆಯ ಸಂಪಾದಕ ಸಂಬಂಧಿಯ ಪತ್ನಿ ಹತ್ಯೆಯಾದ ಮಹಿಳೆಯಾಗಿದ್ದು, ಆಕೆ ISIS ಸಂಘಟನೆಯಲ್ಲಿ ಸಕ್ರಿಯಳಾಗಿದ್ದು, ಈ ಹಿಂದೆ NIA ಬಲೆಗೂ ಬಿದ್ದಿದ್ದಳು ಎನ್ನಲಾಗುತ್ತಿದೆ.



















































 
 

ಸಭ್ಯ ಕುಟುಂಬ ಮೂಲದಿಂದ ಬಂದಿದ್ದ ಸಂಪಾದಕರ ಸೋದರ ಸಂಬಂಧಿಯನ್ನು ವಿವಾಹವಾದ ನಂತರ ISIS ಭಯೋತ್ಪಾದಕ ಸಂಘಟನೆಗೆ ಸೇರ್ಪಡೆಯಾಗಿದ್ದಳು. 2016 ರಲ್ಲಿ ಆಕೆ ಸಿರಿಯಾಕ್ಕೆ ತೆರಳಿ ಭಯೋತ್ಪಾದಕ ತರಬೇತಿ ಪಡೆದಿದ್ದಳು. ಪಾಕೀಸ್ತಾನ ಆಕ್ರಮಿತ ಕಾಶ್ಮೀರದ ಮುಜಫರಾಬಾದ್ ಎಂಬಲ್ಲಿ ಭಯೋತ್ಪಾದಕರು ಅಡಗಿಕೊಂಡಿದ್ದ ಮನೆಯೊಂದರ ಮೇಲೆ ಭಾರತೀಯ ಸೇನಾಪಡೆ ದಾಳಿ ಮಾಡಿದಾಗ ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ ಎಂದು ತಿಳಿದು ಬಂದಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top