ಐಪಿಎಲ್‌ನಲ್ಲಿ ಸೆಂಚುರಿ ಬಾರಿಸಿದ 14 ವರ್ಷದ ವೈಭವ್ ಸೂರ್ಯವಂಶಿ | ವೈಭವ್ ಆಟದ ಬಗ್ಗೆ ಮೋದಿ ಏನಂದ್ರು?

ಬೆಂಗಳೂರು : ಸಾಧಿಸುವ ಛಲವಿದ್ದಲ್ಲಿ ಎಂತಹ ಸಂಧಿಗ್ಧ ಸ್ಥಿತಿ ಎದುರಾದರು ಸಾಧಿಸಿಯೇ ಸಾಧಿಸುತ್ತಾರೆ. ಅಂತದ್ದೇ ಒಂದುಸಾಧನೆಯನ್ನು 14ವರ್ಷದ ಯುವಕ ಮಾಡಿದ್ದಾನೆ.  ಐಪಿಎಲ್‌ನಲ್ಲಿ ಅತಿ ವೇಗ ಸೆಂಚುರಿ ಬಾರಿಸಿದ 14 ವರ್ಷದ ವೈಭವ್ ಸೂರ್ಯವಂಶಿ ಇವತ್ತು ಕ್ರಿಕೆಟ್ ಜಗತ್ತೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ಇವರ ಆಕ್ರಮಣಾಕಾರಿ ಬ್ಯಾಟಿಂಗ್, ಬೌಂಡರಿ, ಸಿಕ್ಸರ್‌ ಶೈಲಿಗೆ ಮಾಜಿ ಕ್ರಿಕೆಟಿಗರು, ಕ್ರಿಕೆಟ್ ಅಭಿಮಾನಿಗಳು ಫಿದಾ ಆಗಿದ್ದಾರೆ.

ರಾಜಸ್ಥಾನ ರಾಯಲ್ಸ್​ ತಂಡದ ಆಟಗಾರ ವೈಭವ್ ಸೂರ್ಯವಂಶಿ ಶತಕ ಸಾಧನೆಯನ್ನು ಮಾಡಿದ್ದಾರೆ. ಈ ಸಾಧನೆಯನ್ನು ಗುರುತಿಸಿದ ಪ್ರಧಾನಿ ಮೋದಿ ವೈಭವ್ ಸೂರ್ಯವಂಶಿಯನ್ನು  ಪ್ರಶಂಸಿದ್ದಾರೆ.  ಬಿಹಾರದ ಪಾಟ್ನಾದಲ್ಲಿ ನಡೆದ ಖೇಲೋ ಇಂಡಿಯಾ ಯುವ ಕ್ರೀಡಾಕೂಟ ಸಮಾರಂಭದಲ್ಲಿ ವರ್ಚುವಲ್ ಮೂಲಕ ಮಾತನಾಡಿದ ಮೋದಿ, ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿ ಇಡೀ ದೇಶದ ಗಮನ ಸೆಳೆದಿದ್ದಾರೆ.

ಐಪಿಎಲ್‌ನಲ್ಲಿ ಬಿಹಾರದ ಮಗ ವೈಭವ್ ಸೂರ್ಯವಂಶಿಯ ಪ್ರದರ್ಶನವನ್ನು ನಾವೆಲ್ಲರೂ ನೋಡಿದ್ದೇವೆ. ವೈಭವ್ ಅತ್ಯಂತ ಕಿರಿಯ ವಯಸ್ಸಿನಲ್ಲಿ ಇಷ್ಟೊಂದು ದೊಡ್ಡ ದಾಖಲೆಯನ್ನು ನಿರ್ಮಿಸಿದ್ದಾರೆ. ಅವರ ಯಶಸ್ಸಿನ ಹಿಂದೆ ಅವರ ಕಠಿಣ ಪರಿಶ್ರಮವಿದೆ. ಅವರು ವಿವಿಧ ಹಂತಗಳಲ್ಲಿ ಕ್ರಿಕೆಟ್ ಆಡಿದ್ದು ಸಹ ಅವರಿಗೆ ಸಹಾಯ ಮಾಡಿತು. ಅವರು ಹೆಚ್ಚು ಆಟವಾಡಿದಷ್ಟೂ ಹೆಚ್ಚು ಪ್ರಕಾಶಮಾನವಾಗಿ ಹೊಳೆಯುತ್ತಾರೆ ಎಂದಿದ್ದಾರೆ.





















































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top