ಉಗ್ರರ ದಾಳಿ ಹಾಗೂ ಸುಹಾಸ್ ಶೆಟ್ಟಿ ಹತ್ಯೆ ಖಂಡಿಸಿ ವಿ.ಎಚ್.ಪಿ. ಹಾಗೂ ಬಜರಂಗದಳ ನೇತೃತ್ವದಲ್ಲಿ ಜಿಲ್ಲಾಡಳಿತದ ವಿರೋಧದ ಮಧ್ಯೆಯೂ ಕಾಫಿನಾಡಿನಲ್ಲಿ ಬಂದ್‍ಗೆ ಕರೆ ನೀಡಿದ್ದು, ಇಂದು ಕಾಫಿನಾಡು ಬಂದ್ ಆಗಿದೆ. ಬಂದ್ ಕರೆಗೆ ಉತ್ತಮವಾದ ಸ್ಪಂದನೆ ವ್ಯಕ್ತವಾಗಿದೆ.
ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಂಪೂರ್ಣ ಸ್ಥಬ್ದಗೊಂಡಿದೆ. ಮಂಗಳೂರು-ಚಿಕ್ಕಮಗಳೂರು ಗಡಿ ಗ್ರಾಮ ಕೊಟ್ಟಿಗೆಹಾರವು ಸ್ವಯಂಪ್ರೇರಿತ ಬಂದ್ ಆಗಿದೆ. ಇಲ್ಲಿ ಹಿಂದೂ ಸಂಘಟನೆಗಳು ಬಂದ್‌ಗೆ ಕರೆ ನೀಡಿದ್ದಾರೆ.
ಕಾಫಿನಾಡು ಸಂಪೂರ್ಣವಾಗಿ ಬಂದ್ ಆದ ಹಿನ್ನಲೆ ಜನ ಸಂಚಾರ, ವಾಹನ ಸಂಚಾರ ಬಂದ್ ಆಗಿದೆ ಎನ್ನಲಾಗಿದೆ.
























