ಪುತ್ತೂರಿಗೆ ಆಗಮಿಸಲಿದೆ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ
ಪುತ್ತೂರು: ಮಾರ್ಚ್ 11 ಕ್ಕೆ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆ ಪುತ್ತೂರಿಗೆ ಆಗಮಿಸಲಿದ್ದು, ಸ್ಟಾರ್ ಪ್ರಚಾರಕರಾಗಿ ಅಣ್ಣಾಮಲೈ ಆಗಮಿಸಲಿದ್ದಾರೆ ಎಂದು ಶಾಸಕ ಸಂಜೀವ ಮಠಂದೂರು ಮಾಹಿತಿ ನೀಡಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ನಾಲ್ಕು ಮೂಲೆಗಳಿಂದ ಹೊರಟಿರುವ ವಿಜಯ ಸಂಕಲ್ಪ ಯಾತ್ರೆ ೨೫ರಂದು ಪ್ರದಾನಿ ನರೇಂದ್ರ ಮೋದಿ ಸಮ್ಮುಖದಲ್ಲಿ ಸಮಾಪನಗೊಳ್ಳಲಿದೆ ಮಾರ್ಚ್ ೧೧ರಂದು ಪುತ್ತೂರಿಗೆ ಆಗಮಿಸಲಿದ್ದು, ಪುತ್ತೂರು ವೆಂಕಟರಮಣ ದೇವಸ್ಥಾನದ ಸಮೀಪ ಸಭಾ ಕಾರ್ಯಕ್ರಮ ಆಯೋಜಿಸಲಾಗಿದ್ದು, ಸಂಸದ ನಳಿನ್ ಕುಮಾರ್ ಕಟೀಲ್ ಭಾಗಿಯಾಗಲಿದ್ದಾರೆ ಎಂದರು.
ಪುರ್ವಾಂಚಲದ ಚುನಾವಣಾ ಫಲಿತಾಂಶದ ಜೊತೆಗೆ ಆರ್ಯಾಪು ಗ್ರಾ.ಪಂ. ಉಪಚುನಾವಣೆಯಲ್ಲಿಯೂ ಬಿಜೆಪಿ ಗೆದ್ದಿದೆ. ಇದೇ ಪುತ್ತೂರು, ರಾಜ್ಯ, ದೇಶದ ಚುನಾವಣೆಯಲ್ಲೂ ಪ್ರತಿಬಿಂಬಿತವಾಗಲಿದೆ. ರಾಜ್ಯದಲ್ಲಿ ಮಾರ್ಚ್ ಕೊನೆಗೆ ಚುನಾವಣೆ ಘೋಷಣೆಯಾಗುವ ಸಾಧ್ಯತೆ ಇದ್ದು, ಬಿಜೆಪಿ ೨ನೇ ಹಂತದ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಂಡಲ ಅಧ್ಯಕ್ಷರಾದ ಸಾಜ ರಾಧಾಕೃಷ್ಣ ಆಳ್ವ, ಜೀವಂಧರ್ ಜೈನ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ಚುನಾವಣಾ ಪ್ರಭಾರಿ ರಾಜೇಶ್ ಕಾವೇರಿ, ಪುತ್ತೂರು ಪ್ರಭಾರಿ ರಾಮ್ ದಾಸ್, ಸಹಪ್ರಭಾರಿ ಗೋಪಾಲಕೃಷ್ಣ ಹೇರಳೆ ಮೊದಲಾದವರು ಉಪಸ್ಥಿತರಿದ್ದರು