ಪುತ್ತೂರು: ಇಲ್ಲಿನ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ೮ನೇ ಶಾಖೆ ಕಾಣಿಯೂರಿನ ರಾಶಿ ಕಾಂಪ್ಲೆಕ್ಸ್ನಲ್ಲಿ ಡಿ. ೧೨ರಂದು ಉದ್ಘಾಟನೆಗೊಂಡಿತು.ಶಾಖೆಯನ್ನು ಉದ್ಘಾಟಿಸಿ ಮಾತನಾಡಿದ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನದ ಮಂಗಳೂರು ಶಾಖಾಮಠದ ಸ್ವಾಮೀಜಿ ಶ್ರೀ ಡಾ. ಧರ್ಮಪಾಲನಾಥ ಸ್ವಾಮೀಜಿ, ಪ್ರತಿ ಜಾತಿ, ಧರ್ಮ, ಮತಗಳು ಒಂದಕ್ಕಿAತ ಒಂದು ಭಿನ್ನವಾಗಿವೆ. ಆದರೆ ಹಣದ ವಿಚಾರ ಬಂದಾಗ ಈ ಭಿನ್ನತೆಗಳು ಕಾಣಸಿಗುವುದಿಲ್ಲ. ದೇವಸ್ಥಾನದಲ್ಲಿ ದೇವರ ಪೂಜೆ ಮಾಡುವವರು ಒಂದು ವರ್ಗ. ದೇವಸ್ಥಾನದ ಹೊರಗಡೆ ನಿಲ್ಲುವವರು ಇನ್ನೊಂದು ವರ್ಗದವರು. ಆದರೆ ಹಣದ ವಿಷಯಕ್ಕೆ ಬಂದಾಗ, ಎಲ್ಲರೂ ಒಂದೇ. ಒಬ್ಬರು ಮುಟ್ಟಿದ ಹಣವನ್ನು ಇನ್ನೊಬ್ಬರು ಪಡೆದುಕೊಳ್ಳುತ್ತಾರೆ. ಆದ್ದರಿಂದ ಆರ್ಥಿಕ ವಿಚಾರಗಳು ಇಲ್ಲಿ ಹೆಚ್ಚು ಶ್ರೇಷ್ಠವಾಗಿ ಕಾಣುತ್ತವೆ. ಇಂತಹ ಆರ್ಥಿಕ ಕೆಲಸಗಳನ್ನು ಉತ್ತೇಜಿಸುವ ಮೂಲಕ, ಸಮಾಜದ ಬದಲಾವಣೆಗೂ ಪ್ರೇರಣೆ ಆಗಲಿದೆ ಎಂದರು.

ಸಹಕಾರ ಸಂಘಗಳ ಪಾತ್ರ ಅರ್ಥಪೂರ್ಣ:
ಮುಖ್ಯ ಅತಿಥಿಯಾಗಿದ್ದ ಶಾಸಕ ಸಂಜೀವ ಮಠಂದೂರು ಮಾತನಾಡಿ, ಸಹಕಾರಿ ಸಂಘಗಳ ಮೂಲಕ ಅಭಿವೃದ್ಧಿಯೆಡೆಗೆ ಸಾಧ್ಯ. ಸಹಕಾರ ಸಂಘಗಳು ನೀಡುವ ಸಾಲ ಸೌಲಭ್ಯವನ್ನು ಪಡೆದುಕೊಳ್ಳುವ ಮೂಲಕ ರಾಜ್ಯದಲ್ಲಿಯೇ ಸಹಕಾರ ಸಂಘಗಳು ಬಹುದೊಡ್ಡ ಸಂಘಗಳಾಗಿ ಮೂಡಿಬಂದಿವೆ. ಸಮಾಜದ ಏಳಿಗೆಯಲ್ಲಿ ಇವುಗಳ ಪಾತ್ರ ಅಗಣಿತ. ಆದ್ದರಿಂದ ಸಹಕಾರಿ ತತ್ವದ ಅಡಿಯಲ್ಲಿ ಕಾರ್ಯನಿರ್ವಹಿಸುವ ಸಹಕಾರಿ ಸಂಘಗಳನ್ನು ಒಗ್ಗಟ್ಟಾಗಿ ಮುಂದುವರಿಸಿಕೊAಡು ಹೋಗುತ್ತಿರುವುದು ಖುಷಿಯ ವಿಚಾರ ಎಂದರು.

ರಾಜ್ಯದಲ್ಲಿ ೪೫ ಸಾವಿರದಷ್ಟು ಸಹಕಾರಿ ಸಂಘಗಳಿವೆ. ಪ್ರತಿ ಸಂಘದಲ್ಲಿಯೂ ೧೩ ಮಂದಿ ನಿರ್ದೇಶಕರ ಮಂಡಳಿಯಿದೆ. ರಾಜ್ಯದ ಒಟ್ಟು ಸಹಕಾರ ಸಂಘಗಳಲ್ಲಿ ೧೩ ಮಂದಿ ನಿರ್ದೇಶಕರಂತೆ ೫,೮೫,೦೦೦ದಷ್ಟು ಮಂದಿ ಸಹಕಾರಿ ತತ್ವದಡಿ ಕೆಲಸ ನಿರ್ವಹಿಸುತ್ತಿದ್ದಾರೆ. ಇದರ ಜೊತೆಗೆ ಸಿಬ್ಬಂದಿಗಳ ಸಂಖ್ಯೆ ಬೇರೆಯೇ ಇದೆ. ಅಂದರೆ ಅರ್ಥ ವ್ಯವಸ್ಥೆಯಲ್ಲಿ ಸಹಕಾರಿ ಸಂಘಗಳು ಅರ್ಥಪೂರ್ಣವಾಗಿ ತೊಡಗಿಸಿಕೊಂಡಿವೆ ಎನ್ನುವುದಕ್ಕೆ ಇದು ಸಾಕ್ಷಿ. ಇದರಲ್ಲಿ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘ ಸಾಲ ಸೌಲಭ್ಯ ನೀಡುತ್ತಾ, ಬಹಳ ಉಪಯುಕ್ತ ಕೆಲಸ ನಿರ್ವಹಿಸುತ್ತಿದೆ ಎಂದು ಶ್ಲಾಘಿಸಿದರು.
ಅಧ್ಯಕ್ಷತೆ ವಹಿಸಿದ್ದ ಪುತ್ತೂರು ಒಕ್ಕಲಿಗ ಗೌಡ ಸಮುದಾಯ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿ ಮಾತನಾಡಿ, ಕಳೆದ ೨೨ ವರ್ಷಗಳಿಂದ ಒಕ್ಕಲಿಗ ಸಹಕಾರ ಸಂಘದ ಸಾಧನೆ ಬಗ್ಗೆ ವಿವರಿಸಿದರು. ಇದೀಗ ಕಾಣಿಯೂರು ಶಾಖೆಯ ಪ್ರಾರಂಭಕ್ಕೆ ದುಡಿದ ರೂವಾರಿಗಳನ್ನು ಅಭಿನಂದಿಸಿದರು.
ಟಿಬಿ ರೋಗಿಗಳಿಗೆ ಪೌಷ್ಠಿಕ ಆಹಾರ:
ಬಾರಂಗಳ ಗುತ್ತು ಪ್ರತಿಷ್ಠಾನದಿಂದ ಮೋಹನ್ ಗೌಡ ಇಡ್ಯಡ್ಕ ಅವರು ೩ ಮಂದಿ ಟಿಬಿ ರೋಗಿಗಳನ್ನು ದತ್ತು ತೆಗೆದುಕೊಂಡಿದ್ದು, ಅವರಿಗೆ ನಿರಂತರವಾಗಿ ಪೌಷ್ಠಿಕ ಆಹಾರ ನೀಡುವ ಭರವಸೆ ನೀಡಿದರು. ಕಾರ್ಯಕ್ರಮದಲ್ಲಿ ೩ ಮಂದಿಗೆ ಪೌಷ್ಠಿಕ ಆಹಾರದ ಕಿಟ್ ನೀಡುವ ಮೂಲಕ ಅಭಿಯಾನವನ್ನು ಆರಂಭಿಸಿದರು.
ಪುತ್ತೂರು ಒಕ್ಕಲಿಗ ಗೌಡ ಸೇವಾ ಸಂಘ ಅಧ್ಯಕ್ಷ ವಿಶ್ವನಾಥ ಗೌಡ ಕೆಯ್ಯೂರು, ಸಹಕಾರಿ ಸಂಘಗಳ ಉಪನಿಬಂಧಕ ಎಚ್.ಎನ್. ರಮೇಶ್ ಶುಭಹಾರೈಸಿದರು. ಕಾಣಿಯೂರು ಶಾಖೆಯ ಆರಂಭಕ್ಕೆ ಶ್ರಮಿಸಿದ ಎಲ್ಲರನ್ನು ಇದೇ ಸಂದರ್ಭ ಗುರುತಿಸಿ, ಗೌರವಿಸಲಾಯಿತು.
ಕಾಣಿಯೂರು ಗ್ರಾಪಂ ಅಧ್ಯಕ್ಷೆ ಲಲಿತ ದರ್ಖಾಸ್ತು, ಸವಣೂರು ಗ್ರಾಪಂ ಅಧ್ಯಕ್ಷೆ ರಾಜೀವಿ ಶೆಟ್ಟಿ, ಬೆಳಂದೂರು ಗ್ರಾಪಂ ಅಧ್ಯಕ್ಷ ಲೋಹಿತಾಕ್ಷ, ಕಾಣಿಯೂರು ಗ್ರಾಪಂ ಉಪಾಧ್ಯಕ್ಷ ಗಣೇಶ್ ಉದನಡ್ಕ, ಪುತ್ತೂರು ಯುವ ಒಕ್ಕಲಿಗ ಸೇವಾ ಸಂಘ ಅಧ್ಯಕ್ಷ ನಾಗೇಶ್ ಕೆಡೆಂಜಿ, ಮಹಿಳಾ ಒಕ್ಕಲಿಗ ಸೇವಾ ಸಂಘದ ಅಧ್ಯಕ್ಷ ಮೀನಾಕ್ಷಿ, ಸಂಸ್ಥೆಯ ಉಪಾಧ್ಯಕ್ಷ ಯು.ಪಿ. ರಾಮಕೃಷ್ಣ, ನಿರ್ದೇಶಕರಾದ ರಾಮಕೃಷ್ಣ ಗೌಡ ಕರ್ಮಲ, ಜಿನ್ನಪ್ಪ ಗೌಡ ಮಳುವೇಲು, ಸುದರ್ಶನ ಗೌಡ ಕೆ., ಸಂಜೀವ ಗೌಡ ಕೆ., ಸತೀಶ್ ಪಾಂಬಾರು, ಪ್ರವೀಣ್ ಕುಂಟ್ಯಾನ, ಲೊಕೇಶ್ ಸಿ.ಎಚ್., ಸುಪ್ರಿತಾ ರವಿಚಂದ್ರ, ತೇಜಸ್ವಿನಿ ಶೇಖರ್ ಗೌಡ, ಸಿಇಓ ಸುಧಾಕರ ಕೆ., ರಾಶಿ ಕಾಂಪ್ಲೆಕ್ಸ್ನ ಮಾಲಕ ಚಂದ್ರಶೇಖರ ಗೌಡ ಉಪಸ್ಥಿತರಿದ್ದರು.ಸಂಸ್ಥೆಯ ನಿರ್ದೇಶಕರಾದ ಮೋಹನ್ ಗೌಡ ಇಡ್ಯಡ್ಕ ಸ್ವಾಗತಿಸಿ, ಪ್ರವೀಣ್ ಕುಂಟ್ಯಾನ ವಂದಿಸಿದರು. ಉದಯ ಕರ್ಮಲ, ಪರಮೇಶ್ವರ ಗೌಡ ಕಾರ್ಯಕ್ರಮ ನಿರೂಪಿಸಿದರು.
























