ಕಡಬ : ತಾಲೂಕಿನ ಚಾರ್ವಾಕ-ಕಂಡಿಗದ ದೊಡ್ಡಮನೆ ಕಂಡಿಗ ತರವಾಡು ಮನೆ ಟ್ರಸ್ಟ್ ನ ಧರ್ಮದೈವ ಶ್ರೀ ರುದ್ರಚಾಮುಂಡಿ ಹಾಗೂ ಪರಿವಾರ ದೈವಗಳ ಪ್ರತಿಷ್ಠಾ ಬ್ರಹ್ಮಕಲಶ ಮತ್ತು ನೇಮೋತ್ಸವ ಏ.1 ಮಂಗಳವಾರದಿಂದ ಆರಂಭಗೊಂಡಿದ್ದು, ಏ.6 ಭಾನುವಾರದ ತನಕ ನಡೆಯಲಿದೆ.
ಏ.1 ರಂದು ಸಂಜೆ 6 ರಿಂದ ನಾಗನಕಟ್ಟೆಯಲ್ಲಿ ಪ್ರಾಸಾದ ಪರಿಗ್ರಹ, ಪ್ರಾರ್ಥನೆ, ಸ್ಥಳಶುದ್ಧಿ, ಪ್ರಾಸಾದ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತುಹೋಮ, ವಾಸ್ತುಬಲಿ, ಬಿಂಬಾದಿವಾಸ, ದಿಕ್ಪಾಲಬಲಿ ನಡೆದು ಅನ್ನಸಂತರ್ಪಣೆ ಜರಗಿತು.
ಏ.2 ಬುಧವಾರ ಬೆಳಿಗ್ಗೆ 7 ರಿಂದ ಶ್ರೀ ಮಹಾಗಣಪತಿ ಹೋಮ, ಪ್ರತಿಷ್ಠಾ ಹೋಮ ಕಲಶಪೂಜೆ, 9.24 ರ ವೃಷಭ ಲಗ್ನದಲ್ಲಿ ನಾಗ ಪ್ರತಿಷ್ಠೆ, ಕಲಶಾಭಿಷೇಕ, ತಂಬಿಲ, ಆಶ್ಲೇಷ ಬಲಿ, ಮಧ್ಯಾಹ್ನ 12 ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪನೆ ನಡೆಯಿತು. ಸಂಜೆ 6 ರಿಂದ ತರವಾಡು ಮನೆಯಪ್ಪಿ ಪ್ರಾಸಾದ ಪರಿಗ್ರಹ, ಸ್ಥಳ ಶುದ್ಧಿ, ಪ್ರಾಸಾದ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತುಹೋಮ, ವಾಸ್ತುಬಲಿ, ದಿಕ್ಪಾಲ, ಬಿಂಬಾಧಿವಾಸ ನಡೆಯಿತು.
ಏ.3 ಗುರುವಾರ ಬೆಳಿಗ್ಗೆ 9.20 ರ ವೃಷಭ ಲಗ್ನದಲ್ಲಿ ದೈವಾಲಯದಲ್ಲಿ ಧರ್ಮದೈವ ಮತ್ತು ಪರಿವಾರ ದೈವಗಳ ಪ್ರತಿಷ್ಠೆ, ಕಲಶಾಭಿಷೇಕ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.
ಏ.5 ಶನಿವಾರ ಸಂಜೆ 4 ಗಂಟೆಗೆ ಧರ್ಮದೈವ ರುದ್ರಚಾಮುಂಡಿ ಹಾಗೂ ಪರಿವಾರ ದೈವಗಳ ಭಂಡಾರ ತೆಗೆಯುವುದು, ರಾತ್ರಿ 7 ಕ್ಕೆ ಪರಿವಾರ ದೈವಗಳ ನೇಮೋತ್ಸವ, ರಾತ್ರಿ 9 ರಿಂದ ಅನ್ನಸಂತರ್ಪಣೆ ನಡೆಯಲಿದೆ.
ಏ.6 ಭಾನುವಾರ ಬೆಳಿಗ್ಗೆ 6 ರಿಂದ ಧರ್ಮದೈವ ರುದ್ರಚಾಮುಂಡಿ ದೈವದ ನೇಮೋತ್ಸವ, ಮಧ್ಯಾಹ್ನ 12 ಕ್ಕೆ ಗುಳಿಗ ದೈವದ ನೇಮ, 1 ಗಂಟೆಯಿಂದ ಅನ್ನಸಂತರ್ಪಣೆ ಜರಗಲಿದೆ ಎಂದು ಕುಟುಂಬದ ಹಿರಿಯರಾದ ಗುಮ್ಮಣ್ಣ ಗೌಡ, ಪರಮೇಶ್ವರ ಗೌಡ ಹಾಗೂ ಕಂಡಿಗ ಕುಟುಂಬಸ್ಥರು ತಿಳಿಸಿದ್ದಾರೆ.
























