ಹವಾಲ ಮೂಲಕ ದುಬೈಗೆ ಕೋಟಿಗಟ್ಟಲೆ ಹಣ ರವಾನೆ
ಬೆಂಗಳೂರು : ನಟಿ ರನ್ಯಾ ರಾವ್ ಮೂರು ತಿಂಗಳಲ್ಲಿ ಬರೋಬ್ಬರಿ 49.6 ಕೆಜಿ ಚಿನ್ನ ಕಳ್ಳ ಸಾಗಾಟ ಮಾಡಿರುವ ವಿಚಾರ ಬಯಲಾಗಿದೆ. ಗೋಲ್ಡ್ ಸ್ಮಗ್ಲಿಂಗ್ ಕೇಸ್ನ ಮೂರನೇ ಆರೋಪಿ ಸಾಹಿಲ್ ಜೈನ್ ಡಿಆರ್ಐ ಮುಂದೆ ಈ ವಿಚಾರ ಬಾಯಿಬಿಟ್ಟಿದ್ದಾನೆ. ನವಂಬರ್ನಿಂದ ರನ್ಯಾ ಬರೋಬ್ಬರಿ 49.6 ಕೆಜಿ ಚಿನ್ನ ಸಾಗಿಸಿದ್ದಾಳೆ. ಈ ಚಿನ್ನವನ್ನೆಲ್ಲ ತಂದು ಸಾಹಿಲ್ ಜೈನ್ಗೆ ಕೊಟ್ಟಿದ್ದ ರನ್ಯಾ ಅದನ್ನು ಆತನ ಮೂಲಕ ಮಾರಾಟ ಮಾಡಿಸುತ್ತಿದ್ದಳು. ಅಷ್ಟೇ ಅಲ್ಲ ಚಿನ್ನ ತರಲು 30 ಕೋಟಿ ರೂಪಾಯಿ ಹವಾಲ ಮೂಲಕ ದುಬೈಗೆ ಸಾಗಾಟ ಮಾಡುತ್ತಿದ್ದಳು ಎನ್ನುವುದು ತನಿಖೆಯಲ್ಲಿ ಬಯಲಾಗಿದೆ.
ಕಳೆದ ನವೆಂಬರ್ ತಿಂಗಳಿನಿಂದ ಬರೋಬ್ಬರಿ 49.6 ಕೆಜಿ ಚಿನ್ನ ತಂದು ತನಗೆ ಕೊಟ್ಟಿರುವುದಾಗಿ ಆರೋಪಿ ಸಾಹಿಲ್ ಜೈನ್ ಡಿಆರ್ಐ ಮುಂದೆ ಬಾಯ್ಬಿಟ್ಟಿದ್ದಾನೆ. 49.6 ಕೆಜಿ ಚಿನ್ನವನ್ನು ಸಾಹಿಲ್ ಜೈನ್ ಮಾರಾಟ ಮಾಡಿದ್ದ. ಪ್ರತಿ ಬಾರಿ ದುಬೈನಿಂದ ಬೆಂಗಳೂರಿಗೆ ಚಿನ್ನ ತಂದು ಮಾರಾಟ ಮಾಡಿದ ಬಳಿಕ ಅದರಿಂದ ಬಂದ ಹಣದಿಂದಲೇ ಮತ್ತೆ ಚಿನ್ನ ಖದೀಗೆ ಹೋಗುತ್ತಿದ್ದಳು. ಇದುವರೆಗೂ 30 ಕೋಟಿ ರೂ. ಹವಾಲ ಮೂಲಕ ದುಬೈಗೆ ಸಾಗಾಟವಾಗಿರುವ ಮಾಹಿತಿ ಲಭ್ಯವಾಗಿದೆ.
ಪ್ರತಿ ಬಾರಿ ದುಬೈಗೆ ಹವಾಲ ಮೂಲಕ ಹಣ ರವಾನಿಸುವ ಕೆಲಸವನ್ನು ಸಾಹಿಲ್ ಜೈನ್ ಮೂಲಕ ಮಾಡಿಸುತ್ತಿದ್ದಳು. ಇದಕ್ಕೂ ಮುನ್ನ ಜನವರಿಯಲ್ಲಿ 55 ಲಕ್ಷ ರೂ, ಫೆಬ್ರವರಿಯಲ್ಲಿ 55 ಲಕ್ಷ, ಮತ್ತೊಮ್ಮೆ 30 ಲಕ್ಷ ಸೇರಿ ಒಟ್ಟು 1,73,61,787 ರೂ ಹಣವನ್ನು ಮನೆಗೆ ಹವಾಲ ಮೂಲಕ ತರಿಸಿಕೊಂಡಿದ್ದಾಳೆ. ಪ್ರತಿ ಬಾರಿ ಹವಾಲಾ ವಹಿವಾಟಿಗೆ ಸಾಹಿಲ್ ಜೈನ್ ಐವತ್ತೈದು ಸಾವಿರ ಕಮಿಷನ್ ಪಡೆಯುತ್ತಿದ್ದ.
ಆದರೆ ಡಿಆರ್ಐಗೆ ಇದುವರೆಗೆ ಸಿಕ್ಕಿರುವುದು 14.206 ಕೆಜಿ ಚಿನ್ನ, 2,67,00,000 ರೂ. ನಗದು ಮತ್ತು ಎರಡು ಕೆಜಿ ಚಿನ್ನದ ಆಭರಣ.

