ಆಲಂಕಾರು ರಥಬೀದಿ ಕ್ರಿಕೆಟರ್ಸ್‍ ನಿಂದ ಆಲಂಕಾರು ವಲಯದ ಹಿಂದೂ ಬಾಂಧವರಿಗೆ ರಥಬೀದಿ ಪ್ರಿಮಿಯರ್ ಲೀಗೇಜ್‍  ಕ್ರಿಕೇಟ್‍ ಪಂದ್ಯಾಟ | ಪಂದ್ಯಾಟದಲ್ಲಿ ಉಳಿಕೆಯಾದ ಮೊತ್ತ ಅನಾರೋಗ್ಯಕ್ಕೊಳಗಾದ ಎರಡು ಬಡ ಕುಟುಂಬಕ್ಕೆ ಹಸ್ತಾಂತರ

ಕಡಬ: ತಾಲೂಕಿನ ಆಲಂಕಾರು ರಥಬೀದಿ ಕ್ರಿಕೆಟರ್ಸ್ ವತಿಯಿಂದ ಆಲಂಕಾರು ವಲಯದ ಹಿಂದೂ ಬಾಂಧವರಿಗೆ ರಥಬೀದಿ ಪ್ರಿಮಿಯರ್ ಲೀಗೇಜ್‍ ಕ್ರಿಕೇಟ್‍ ಪಂದ್ಯಾಟ ನಡೆಸಿದ್ದು, ಪಂದ್ಯಾಟದಲ್ಲಿ ಉಳಿಕೆಯಾದ ಮೊತ್ತವನ್ನು ಅನಾರೋಗ್ಯದಿಂದ ಬಳಲುತ್ತಿರುವ ಎರಡು ಕುಟುಂಬಗಳಿಗೆ ಸಹಾಯಧನ ರೂಪದಲ್ಲಿ ವಿತರಿಸಲಾಯಿತು.

ಸಾಧನೆಗೆ ಸಹಕಾರ, ಆಶಕ್ತರಿಗೆ ಶಕ್ತಿ (ಬಡ ಮಕ್ಕಳ ವಿದ್ಯೆಗೆ ಪ್ರೋತ್ಸಾಹಧನ, ಅಸಮರ್ಥರಿಗೆ ನೆರವು ಎಂಬ ಧ್ಯೇಯ ವಾಕ್ಯದೊಂದಿಗೆ ನಡೆದ ಆಲಂಕಾರು ವಲಯದ ಹಿಂದೂ ಬಾಂಧವರ 10 ತಂಡಗಳ ಲೀಗ್‍ ಮಾದರಿಯ ಪಂದ್ಯಾಟದ ಸಮಾರಂಭದಲ್ಲಿ ಸ್ಟ್ರೋಕ್‍ ಗೆ ಒಳಗಾದ ಶ್ರೀಧರ ನೂಜೋಡು ಹಾಗೂ ಆಕಸ್ಮಿಕವಾಗಿ ಬಿದ್ದು ಬೆನ್ನುಮೂಳೆ ಮುರಿತಕ್ಕೊಳಗಾದ ಲಿಖಿನ್‍ ಕಕ್ವೆ ಎಂಬವರಿಗೆ ಉಳಿಕೆ ಮೊತ್ತದಲ್ಲಿ ತಲಾ ಹತ್ತು ಸಾವಿರ ಸಹಾಯಧನ ನೀಡಲಾಯಿತು.

ಸಮಾರಂಭದಲ್ಲಿ ಪಿಯುಸಿ, ಎಸ್‍ ಎಸ್ ಎಲ್ ಸಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಅಭಿಲಾಷಾ ಪಿ.ಡಿ. ಕೀರ್ತಿ ಹಾಗೂ ರಾಷ್ಟ್ರಮಟ್ಟದಲ್ಲಿ ಮಿಂಚಿದ ವಿದ್ಯಾರ್ಥಿ ಕಿಶನ್‍ ದ್ರಾವಿಡ್ ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.





















































 
 

ಪಂದ್ಯಾಟದ ಉದ್ಘಾಟನಾ ಸಮಾರಂಭದಲ್ಲಿ ಆಲಂಕಾರು ಆದಿತ್ಯ ಕ್ಲಿನಿಕ್‍ ನ ಡಾ. ಆಕಾಶ್‍ ಹಾಗೂ ಆಲಂಕಾರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಶೀಲ ಪಾಲ್ಗೊಂಡು ಶುಭ ಹಾರೈಸಿದರು.

ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಆಲಂಕಾರು ಶತಾಕ್ಷಿ ಕ್ಲಿನಿಕ್‍ ನ ಡಾ.ಕೃತಿ ಶೆಟ್ಟಿ, ಆಲಂಕಾರು ಪ್ರಭು ಸ್ಟೋರ್‍ ನ ರವಳನಾಥ ಪ್ರಭು ಹಾಗೂ ಆಲಂಕಾರು ಕೋಟಿ ಚೆನ್ನಯ ಮಿತ್ರವೃಂದದ ಅಧ್ಯಕ್ಷ ಜಯಂತ ಪೂಜಾರಿ ಪಾಲ್ಗೊಂಡು ಶುಭ ಹಾರೈಸಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top