ಪುತ್ತೂರು : ಅಖಿಲ ಕರ್ನಾಟಕ ಹಿರಿಯರ ಸೇವಾಪ್ರತಿಷ್ಠಾನ( ರಿ ) ಮೆಲ್ಕಾರ್ ಬಂಟ್ವಾಳ ಇದರ ಪುತ್ತೂರು ಘಟಕದ ಸಭೆಯು ಪುತ್ತೂರು ಸ್ವಾಗತ ಹೋಟೆಲ್ ಸಭಾಂಗಣದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಪುತ್ತೂರು ಘಟಕದ ಅಧ್ಯಕ್ಷ ಚಂದ್ರಶೇಖರ ಆಳ್ವ ಪಡುಮಲೆ ಹಿರಿಯರ ಸೇವಾ ಸಂಘಟನೆಯನ್ನು ಸದಸ್ಯರ ಸೇರ್ಪಡೆ ಮಾಡುವ ಮೂಲಕ ಬಲಪಡಿಸಬೇಕೆಂದು ತಿಳಿಸಿದರು. ಪ್ರತೀ ತಿಂಗಳ ಕೊನೆಯ ಗುರುವಾರ ಸಭೆ ನಡೆಸುವ ಮತ್ತು ಸಮಾಜದ ವಿವಿದ ರಂಗಗಳಲ್ಲಿ ಸೇವೆ ಸಲ್ಲಿಸಿದ ಹಿರಿಯರನ್ನು ಗುರುತಿಸಿ ಗೌರವಿಸಲು ತೀರ್ಮಾನಿಸಲಾಯಿತು. ಸಭೆಯಲ್ಲಿ ಕೇಂದ್ರ ಸಮಿತಿಯ ಸಂಚಾಲಕ ಭಾಸ್ಕರ ಬಾರ್ಯ, ಉಪಾಧ್ಯಕ್ಷ ಲೋಕೇಶ ಹೆಗ್ಡೆ, ಉರ್ಲಾಂಡಿ, ದುಗ್ಗಪ್ಪ. ಯನ್ , ತಾಲೂಕು ಕಾರ್ಯದರ್ಶಿ ಬಾಲಕೃಷ್ಣ ಅನಾರು, ಉಪಾಧ್ಯಕ್ಷೆ ಪ್ರೇಮಲತಾ ರಾವ್ ಭಾಗವಹಿಸಿದ್ದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಪುತ್ತೂರು ಘಟಕದ ಅಧ್ಯಕ್ಷ ಚಂದ್ರಶೇಖರ ಆಳ್ವ ಪಡುಮಲೆ ಸ್ವಾಗತಿಸಿ, ತಾಲೂಕು ಸಂಚಾಲಕ ಭವಾನಿ ಶಂಕರ ಶೆಟ್ಟಿ ಪುತ್ತೂರು ಧನ್ಯವಾದ ಗೈದರು.