ಪುತ್ತೂರು : ರಾಷ್ಟ್ರ ಮಟ್ಟದ INSEF ವಿಜ್ಞಾನ ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 8ನೇ ತರಗತಿ ವಿದ್ಯಾರ್ಥಿ ಸಮೃದ್ಧ್ ಆರ್ ಶೆಟ್ಟಿ ತೃತೀಯ ಸ್ಥಾನ ಪಡೆದು, ಕಂಚಿನ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ.
ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಅವಿಷ್ಕಾರಗಳ ಬಗ್ಗೆ ಆಸಕ್ತಿ ಮತ್ತು ಕ್ರೀಯಾಶೀಲತೆಯನ್ನು ಬೆಳೆಸುವ ಸಲುವಾಗಿ ಜೂನಿಯರ್ ವಿಭಾಗದಲ್ಲಿ INSEF ವತಿಯಿಂದ ಜನವರಿ 11ರಂದು ಬೆಂಗಳೂರಿನ ವಾಗ್ದೇವಿ ವಿಲಾಸ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ರಾಷ್ಟ್ರೀಯ ಮಟ್ಟದ ಸ್ಪರ್ಧೆ ನಡೆಯಿತು.
ಸಮೃದ್ಧ್ ಆರ್ ಶೆಟ್ಟಿ, ಶಿಕ್ಷಕ ದಂಪತಿ ರಾಮಚಂದ್ರ ಶೆಟ್ಟಿ ಮತ್ತು ಶೋಭಾ ಶೆಟ್ಟಿ ಇವರ ಪುತ್ರ
ತೃತೀಯ ಸ್ಥಾನದೊಂದಿಗೆ ಕಂಚಿನ ಪದಕದಿಂದ ಪುರಸ್ಕೃತಗೊಂಡಿದ್ದ ಇವರು ಜೂನಿಯರ್ ವಿಭಾಗದಲ್ಲಿ ಸೈನಿಕರಿಗೆ, ಸಶಸ್ತ ಪಡೆಗಳಿಗೆ ಅನುಕೂಲವಾಗಬಹುದಾದ “ಲ್ಯಾಂಡ್ ಮೈನಿಂಗ್ ಡಿಟೆಕ್ಟ್ರ್” ಎಂಬ ಅವಿಷ್ಕಾರವನ್ನು ಪ್ರಸ್ತುತ ಪಡಿಸಿರುತ್ತಾರೆ.
ಇದೇ ಸ್ಪರ್ಧೆಗಳ ಸೀನಿಯರ್ ವಿಭಾಗದಲ್ಲಿ 9ನೇ ತರಗತಿಯ ವಿದ್ಯಾರ್ಥಿನಿ ಕುಮಾರಿ ಸುಪ್ರಜಾ ರಾವ್ ಉಪನ್ಯಾಸಕ ದಂಪತಿ ಪ್ರಶಾಂತ್ ರಾವ್ ಮತ್ತು ಸುಮನಾ ರಾವ್ ಇವರ ಪುತ್ರಿ ಭಾಗವಹಿಸಿದ್ದು, ಈ “ನಾರಿಕೇಳ ದ ಹೀಲಿಂಗ್” ಎಂಬ ಮುಲಾಮು ತೀರ್ಪುಗಾರರ ಪ್ರಶಂಸೆಗೆ ಪಾತ್ರರಾಗಿದ್ದಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.