ಪಾಕಿಸ್ಥಾನಕ್ಕೆ ಟ್ರಂಪ್‌ ಹೊಡೆತ : ನೆರವುಗಳೆಲ್ಲ ರದ್ದು

ದಿವಾಳಿಯಾಗಿ ಕಂಗಾಲಾಗಿರುವ ಪಾಕ್‌ಗೆ ಇನ್ನಷ್ಟು ಸಂಕಟ

ವಾಷಿಂಗ್ಟನ್‌: ಎರಡನೇ ಬಾರಿಗೆ ಅಧ್ಯಕ್ಷರಾಗಿರುವ ಡೊನಾಲ್ಡ್ ಟ್ರಂಪ್ ಪಾಕಿಸ್ಥಾನಕ್ಕೆ ಭಾರಿ ಹೊಡೆತವನ್ನೇ ನೀಡಿದ್ದಾರೆ. ಪಾಕಿಸ್ಥಾನಕ್ಕೆ ಅಮೆರಿಕ ನೀಡುತ್ತಿದ್ದ ಕೋಟಿಗಟ್ಟಲೆ ಡಾಲರ್‌ ನೆರವನ್ನು ಟ್ರಂಪ್‌ ಸ್ಥಗಿತಗೊಳಿಸಿದ್ದಾರೆ. ಮೊದಲೇ ದಿವಾಳಿಯಾಗಿ ಕಂಗಾಲಾಗಿರುವ ಪಾಕಿಸ್ಥಾನದ ಪಾಲಿಗೆ ಟ್ರಂಪ್‌ ನಿರ್ಧಾರ ಮರ್ಮಾಘಾತವಾಗಿ ಪರಿಣಮಿಸಿದೆ.
ಟ್ರಂಪ್‌ ಹೊರಡಿಸಿದ ಆದೇಶದ ನಂತರ ಪಾಕಿಸ್ಥಾನಕ್ಕೆ ಅಮೆರಿಕ ನೀಡುತ್ತಿದ್ದ ವಿದೇಶಿ ನೆರವನ್ನು ಮರುಮೌಲ್ಯಮಾಪನದ ಉದ್ದೇಶದಿಂದ ಅಮಾನತುಗೊಳಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಅಮೆರಿಕದ ಈ ನಿರ್ಧಾರದಿಂದ ಸಾಂಸ್ಕೃತಿಕ ಪರಂಪರೆ ಸಂರಕ್ಷಣೆ ಪ್ರೋತ್ಸಾಹಿಸುವ ಸಾಂಸ್ಕೃತಿಕ ಸಂರಕ್ಷಣೆಗಾಗಿ ರಾಯಭಾರಿಗಳ ನಿಧಿ ಯೋಜನೆ ಸೇರಿದಂತೆ ಪಾಕಿಸ್ಥಾನದಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಅಭಿವೃದ್ಧಿಗಾಗಿರುವ ಅಮೆರಿಕದ ಹಲವು ಯೋಜನೆಗಳು ಸ್ಥಗಿತಗೊಂಡಿವೆ. ಟ್ರಂಪ್ ನಿರ್ಧಾರದಿಂದ ಆರ್ಥಿಕ ಕ್ಷೇತ್ರಕ್ಕೆ ಸಂಬಂಧಿಸಿದ ನಾಲ್ಕು ಯೋಜನೆಗಳು ಇಂಧನ ಕ್ಷೇತ್ರಕ್ಕೆ ಸಂಬಂಧಿಸಿದ ಐದು ಯೋಜನೆಗಳು ಕೂಡ ಸ್ಥಗಿತಗೊಂಡಿವೆ ಎಂದು ವರದಿ ತಿಳಿಸಿದೆ.
ಅಮೆರಿಕದ ಕ್ರಮ ಆರೋಗ್ಯ, ಕೃಷಿ, ಜೀವನೋಪಾಯ ಮತ್ತು ಆಹಾರ ಭದ್ರತೆ, ಪ್ರವಾಹ, ಹವಾಮಾನ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದ ಅನೇಕ ಯೋಜನೆಗಳಿಗೂ ಹೊಡೆತ ನೀಡಿದೆ. ಟ್ರಂಪ್ ಆದೇಶದಿಂದ ಪ್ರಜಾಪ್ರಭುತ್ವ, ಮಾನವ ಹಕ್ಕುಗಳು ಮತ್ತು ಆಡಳಿತ ನಿಧಿಗಳಿಗೂ ಹೊಡೆತ ಬಿದ್ದಿದೆ. ಈ ಕೆಲವು ಕಾರ್ಯಕ್ರಮಗಳು ಶಾಶ್ವತವಾಗಿ ಸ್ಥಗಿತಗೊಳ್ಳಲಿವೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top