ಸುಳ್ಯ:ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳ ನಿರ್ದೇಶಕರಾಗಿ ಶ್ರೀ ವೆಂಕಟರಮಣ ಕ್ರೆಡಿಟ್ ಕೋಆಪರೇಟಿವ್ ಸೊಸೈಟಿಯ ನಿರ್ದೇಶಕ ಚಂದ್ರ ಕೋಲ್ಚಾರ್ ಆಯ್ಕೆಯಾಗಿದ್ದಾರೆ.
ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳ ಆಡಳಿತ ಮಂಡಳಿಗೆ ಇಂದು ನಡೆದ ಚುನಾವಣೆಯಲ್ಲಿ ಮೈಸೂರು ವಿಭಾಗದಿಂದ ಗೆಲುವು ಸಾಧಿಸಿ ಚಂದ್ರ ಕೋಲ್ಚಾರ್ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.
ಮೈಸೂರು, ಮಂಡ್ಯ, ಕೊಡಗು, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ ಜಿಲ್ಲೆಗಳನ್ನು ಒಳಗೊಂಡ ಮೈಸೂರು ವಿಭಾಗದಿಂದ ಚಂದ್ರ ಕೋಲ್ಟಾರ್ ಸೇರಿ 3 ಮಂದಿ ನಿರ್ದೇಶಕರು ಆಯ್ಕೆಯಾಗಿದ್ದಾರೆ. 5 ಸ್ಥಾನಗಳಿಗೆ ಹೆಚ್. ಅಶೋಕ್, ಚಿತ್ತರಂಜನ್ ಬೋಳಾರ್, ಎಸ್.ಚಂದ್ರಶೇಖರ್, ಚಂದ್ರ ಕೋಲ್ಚಾರ್, ಮಾಜಿ ಸಚಿವೆ ಮೋಟಮ್ಮ ಸೇರಿ 5 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದರು. ಹೆಚ್ಚು ಮತ ಪಡೆದ ಚಂದ್ರ ಕೋಲ್ಚಾರ್, ಹೆಚ್. ಅಶೋಕ, ಎಸ್.ಚಂದ್ರಶೇಖರ್ ಆಯ್ಕೆಯಾಗಿದ್ದಾರೆ. ಮಹಾಮಂಡಲದಲ್ಲಿ ಸದಸ್ಯತ್ವ ಪಡೆದಿರುವ ಸಹಕಾರ ಸಂಘಗಳ ಪ್ರತಿನಿಧಿ ಮತದಾರರಾಗಿದ್ದರು.