ಕಾರು, ಬೈಕ್‌ ಖರೀದಿಸುವವರಿಗೆ ಸೆಸ್‌ ಬರೆ

ಫೆ.1ರಿಂದಲೇ ಜಾರಿಗೆ ಬರಲಿದೆ ಹೊಸ ಮೇಲ್ತೆರಿಗೆ

ಬೆಂಗಳೂರು : ಗ್ಯಾರಂಟಿ ಯೋಜನೆಗಳಿಂದಾಗಿ ಖಜಾನೆ ಖಾಲಿಯಾಗಿ ಪರದಾಡುತ್ತಿರುವ ಕಾಂಗ್ರೆಸ್‌ ಸರಕಾರ ಈಗ ಸಂಪನ್ಮೂಲ ಕ್ರೋಡೀಕರಣಕ್ಕೆ ವಾಹನ ಖರೀದಿಸುವವರಿಗೆ ಬರೆ ಹಾಕಲು ಮುಂದಾಗಿದೆ. ಫೆಬ್ರವರಿ 1ರಿಂದಲೇ ಹೊಸದಾಗಿ ಕಾರು ಮತ್ತು ಬೈಕ್ ಖರೀದಿ ಮಾಡುವವರಿಗೆ ಕರ್ನಾಟಕ ಸರ್ಕಾರ ಸೆಸ್‌ ಹಾಕಲಿದೆ.

ಕಾರು, ಬೈಕ್ ಖರೀದಿ ಮಾಡುವವರಿಂದ ಹೆಚ್ಚುವರಿ ಸೆಸ್ ಸಂಗ್ರಹಕ್ಕೆ ಸಾರಿಗೆ ಇಲಾಖೆ ನಿರ್ಧರಿಸಿದ್ದು, ಅಧಿಕೃತ ಆದೇಶ ಹೊರಡಿಸಿದೆ. ಹೊಸ ಕಾರು ಖರೀದಿ ಮಾಡುವವರು ಒಂದು ಸಾವಿರ ರೂಪಾಯಿ, ಹೊಸದಾಗಿ ಬೈಕ್ ಖರೀದಿ ‌ಮಾಡುವವರು 500 ರೂ. ಹೆಚ್ಚುವರಿಯಾಗಿ ಸೆಸ್ ರೂಪದಲ್ಲಿ ಸಾರಿಗೆ ಇಲಾಖೆಗೆ ಪಾವತಿ ಮಾಡಬೇಕು.































 
 

ಮೋಟಾರು ಸಾರಿಗೆ ಮತ್ತು ಇತರ ಸಂಬಂಧಿತ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ಧಿ ನಿಧಿಯ ಉದ್ದೇಶಕ್ಕಾಗಿ, ಸಾರಿಗೇತರ ವಾಹನಗಳ ನೋಂದಣಿ (ರಿಜಿಸ್ಟ್ರೇಷನ್) ಸಮಯದಲ್ಲಿ ದ್ವಿಚಕ್ರ ವಾಹನಗಳಿಗೆ 500 ರೂಪಾಯಿ, ಮೋಟಾರು ಕಾರುಗಳಿಗೆ 1 ಸಾವಿರ ರೂಪಾಯಿಗಳನ್ನು ಹೆಚ್ಚುವರಿಯಾಗಿ ‌ಸಂಗ್ರಹಿಸಲಾಗುತ್ತದೆ. ಯೆಲ್ಲೊ ಬೋರ್ಡ್ ವಾಹನಗಳನ್ನು ಖರೀದಿ ಮಾಡುವವರ ಬಳಿ ಸೆಸ್ ಸಂಗ್ರಹ ಮಾಡುವಂತಿಲ್ಲ ಎಂದು ರಾಜ್ಯ ಸಾರಿಗೆ ‌ಇಲಾಖೆ ಅಧಿಕೃತ ಆದೇಶದಲ್ಲಿ ಉಲ್ಲೇಖಿಸಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top