ಪುತ್ತೂರು: ಜ.28 ರಿಂದ ಫೆ.1 ತನಕ ಉತ್ತರಾಖಂಡ್ ರಾಜ್ಯದಲ್ಲಿ ನಡೆಯಲಿರುವ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸುವ ಕರ್ನಾಟಕ ರಾಜ್ಯ ಪುರುಷರ ಖೋಖೋ ತಂಡದ ಸಹಾಯಕ ತರಬೇತುದಾರರಾಗಿ ಪುತ್ತೂರಿನ ಕಾರ್ತಿಕ್ ಎನ್. ಆಯ್ಕೆಯಾಗಿದ್ದಾರೆ.
ಖೋಖೋ ಕೋಚಿಂಗ್ನಲ್ಲಿ ಎನ್.ಐ.ಎಸ್ ಅರ್ಹತೆ ಇರುವ ತರಬೇತುದಾರರಾಗಿರುವ ಅವರು ಪ್ರಸ್ತುತ ಮಂಗಳೂರಿನ ಕೆನರಾ ಕಾಲೇಜಿನಲ್ಲಿ ದೈಹಿಕ ಶಿಕ್ಷಣ ನಿರ್ದೇಶಕರಾಗಿ ಕಾರ್ಯನಿರ್ವಹಿಸುತಿದ್ದಾರೆ. ಪ್ರಾಥಮಿಕ ಶಿಕ್ಷಣವನ್ನು ಬಿ.ಇ.ಎಂ ಶಾಲೆ, ಪ್ರೌಢ ಶಿಕ್ಷಣವನ್ನು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ, ಪಿಯು ಶಿಕ್ಷಣವನ್ನು ಕೊಂಬೆಟ್ಟು ಸರಕಾರಿ ಪ.ಪೂ ಕಾಲೇಜು ಹಾಗೂ ಪದವಿಯನ್ನು ಜಿಡೆಕಲ್ಲು ಸರಕಾರಿ ಪದವಿ ಕಾಲೇಜಿನಲ್ಲಿ ಪೂರೈಸಿದ್ದಾರೆ. ಬಿ.ಪಿ.ಎಡ್ ಮತ್ತು ಎಂ.ಪಿ.ಎಡ್ ಪದವಿಯನ್ನು ಆಳ್ವಾಸ್ ಕಾಲೇಜಿನಲ್ಲಿ ಹಾಗೂ ಬೆಂಗಳೂರಿನ ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ಎನ್.ಐ.ಎಸ್ ಡಿಪ್ಲೊಮೊ ಪಡೆದಿದ್ದಾರೆ. ಅಲ್ಲದೆ ಖೋಖೋ ಫೆಡರೇ?ನ್ ಆಫ್ ಇಂಡಿಯಾದಿಂದ ರಾಷ್ಟ್ರೀಯ ಖೋಖೋ ತೀರ್ಪುಗಾರರಾಗಿ ಕೂಡ ಅರ್ಹತೆ ಪಡೆದಿದ್ದಾರೆ. ಅಖಿಲ ಭಾರತ ಅಂತರ್ ವಿಶ್ವವಿದ್ಯಾನಿಲಯ ಮಟ್ಟದ ಖೋಖೋ ಪಂದ್ಯಾಟದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಿದ್ದಾರೆ.
ಪುತ್ತೂರು ನೆಹರುನಗರದ ಸಿಟಿಗುಡ್ಡೆ ನಿವಾಸಿ ನಾರಾಯಣ ಮತ್ತು ವಿಜಯ ದಂಪತಿ ಪುತ್ರ.